‌ಕೇಂದ್ರ ಬಜೆಟ್ 2024| ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ

Update: 2024-07-23 16:17 GMT

 ವಿಷ್ಣುಪಾದ ದೇವಾಲಯ ಕಾರಿಡಾರ್ ,  ಮಹಾಬೋಧಿ ದೇವಾಲಯ ಕಾರಿಡರ್‌ 

ಹೊಸದಿಲ್ಲಿ: ನಿರ್ಮಲಾ ಸೀತಾರಾಮನ್ ಅವರು ತನ್ನ ಬಜೆಟ್ ಭಾಷಣದಲ್ಲಿ ಭಾರತದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶ ಹೊಂದಿದ ಸರಣಿ ಉಪಕ್ರಮಗಳನ್ನು ಅನಾವರಣಗೊಳಿಸಿದ್ದಾರೆ.

ಪ್ರವಾಸೋದ್ಯಮದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಭಾರತವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಮಾಡುವ ಹಲವು ಯೋಜನೆಗಳ ಕುರಿತು ಗಮನ ಸೆಳೆದರು.

ಬಿಹಾರದಲ್ಲಿರುವ ವಿಷ್ಣುಪಾದ ದೇವಾಲಯ ಕಾರಿಡಾರ್ ಹಾಗೂ ಮಹಾಬೋಧಿ ದೇವಾಲಯ ಕಾರಿಡರ್‌ನ ಸಮಗ್ರ ಅಭಿವೃದ್ದಿಗೆ ಸಿದ್ಧತೆ ನಡೆಯುತ್ತಿದೆ. ಧಾರ್ಮಿಕ ಹಾಗೂ ಚಾರಿತ್ರಿಕ ಪ್ರಾಮುಖ್ಯತೆ ಇರುವ ಈ ತಾಣಗಳನ್ನು ಜಾಗತಿಕ ಮಟ್ಟದ ಯಾತ್ರಾ ಹಾಗೂ ಪ್ರವಾಸ ತಾಣವಾಗಿ ಮಾರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.

ಇನ್ನೊಂದು ಚಾರಿತ್ರಿಕ ಸ್ಥಳವಾದ ರಾಜ್‌ಗಿರ್ ವ್ಯಾಪಕ ಅಭಿವೃದ್ಧಿಯನ್ನು ಕಾಣಲಿದೆ. ಇದಲ್ಲದೆ, ನಲಂದಾ ವಿಶ್ವವಿದ್ಯಾನಿಲಯವನ್ನು ಅದರ ಹಿಂದಿನ ವೈಭವದೊಂದಿಗೆ ಪುನರ್ ನವೀಕರಣಗೊಳಿಸುವ ಯೋಜನೆ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಒಡಿಶಾದಲ್ಲಿ ಕೂಡ ಪ್ರವಾಸೋದ್ಯಮದ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸಲಿದೆ. ತನ್ನ ರಮಣೀಯ ದೃಶ್ಯ, ದೇವಾಲಯ, ಕಲೆಗಾರಿಕೆ ಹಾಗೂ ವನ್ಯಜೀವಿಗೆ ಜನಪ್ರಿಯವಾಗಿರುವ ಒಡಿಶಾ ಪ್ರವಾಸಿ ತಾಣವಾಗಿ ಪ್ರಾಮಖ್ಯತೆ ಹೊಂದಿದೆ. ರಾಜ್ಯಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಈ ಸ್ಥಳಗಳನ್ನು ಅಭಿವೃದ್ಧಿಗೊಳಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News