ಕೇಂದ್ರ ಬಜೆಟ್ | ತೆರಿಗೆ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸುಧಾರಣೆ: ನಿರ್ಮಲಾ ಸೀತಾರಾಮನ್
Update: 2025-02-01 13:26 IST

ನಿರ್ಮಲಾ ಸೀತಾರಾಮನ್ (Photo: PTI)
ಹೊಸದಿಲ್ಲಿ : ಕೇಂದ್ರ ಬಜೆಟ್ 2025 ತೆರಿಗೆ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಪ್ರಾರಂಭಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸತತ 8ನೇ ಬಜೆಟ್ ನ್ನು ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್, 2025-26ರ ಕೇಂದ್ರ ಬಜೆಟ್ ತೆರಿಗೆ, ನಗರಾಭಿವೃದ್ಧಿ, ಗಣಿಗಾರಿಕೆ, ವಿದ್ಯುತ್, ಹಣಕಾಸು ಕ್ಷೇತ್ರ, ನಿಯಂತ್ರಣಾ ಸುಧಾರಣೆಗಳು ಮತ್ತು ಕೃಷಿ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳ ಅಭಿವೃದ್ಧಿಯ ದಾಖಲೆಗಳು ಮತ್ತು ರಚನಾತ್ಮಕ ಸುಧಾರಣೆಗಳು ಜಾಗತಿಕವಾಗಿ ಗಮನವನ್ನು ಸೆಳೆದಿವೆ. ಶೂನ್ಯ ಬಡತನ, ಗುಣಮಟ್ಟದ ಶಿಕ್ಷಣ, ಉನ್ನತ ಗುಣಮಟ್ಟದ ಸಮಗ್ರ ಆರೋಗ್ಯ ಸೇವೆ ಹೊಂದಿರಲಿದೆ ಎಂದು ಹೇಳಿದ್ದಾರೆ.