ಉತ್ತರಾಖಂಡ: 200 ರಸ್ತೆ ಸಂಪರ್ಕ ಕಡಿತ- ಮತ್ತಷ್ಟು ಮಳೆ ನಿರೀಕ್ಷೆ
ಡೆಹ್ರಾಡೂನ್: ಕಳೆದ ಮೂರು ದಿನಗಳಿಂದ ಉತ್ತರಾಖಂಡದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿ 200ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಬುಧವಾರದಿಂದ ರಾಜ್ಯದಲ್ಲಿ ಮತ್ತಷ್ಟು ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ಅಂದಾಜಿಸಿದೆ.
ಭಾರಿ ಮಳೇಯ ಕಾರಣದಿಂದಾಗಿ ಡೆಹ್ರಾಡೂನ್ ಜಿಲ್ಲೆಯ ಸರಖೇತ್ ಎಂಬಲ್ಲಿ ಮಲ್ದೇವತಾ- ಸೌಖೋಲಿ ರಸ್ತೆಯ ಸುಮಾರು 100 ಮೀಟರ್ಗಳು ಹೆಚ್ಚು ಕೊಚ್ಚಿಕೊಂಡು ಹೋಗಿದೆ ಎಂದು ಸರ್ಖೇತ್ ಪ್ರಧಾನ ಸಂಜಯ ಕೋತ್ವಾಲ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು, ಸೌಖೋಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದೆ ಎಂದು ವಿವರಿಸಿದ್ದಾರೆ.
ತಡೆಗೋಡೆಗಳು ಹಾನಿಗೀಡಾಗಿವೆ. ಮಳೆ ನಿಂತ ಬಳಿಕವಷ್ಟೇ ಸಂಪರ್ಕವನ್ನು ಮರುಸ್ಥಾಪಿಸಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ. ಡೆಹ್ರಾಡೂನ್ನ ಹಲವು ಪ್ರದೇಶಗಳಲ್ಲಿ ಸೋಮವಾಋ ಸಂಜೆ ಕೂಡಾ ವ್ಯಾಪಕ ಮಳೆಯಾಗಿದೆ. ಎಲ್ಲ ಪ್ರದೇಶಗಳಲ್ಲಿ ನೀರು ನಿಂತಿದ್ದು, ರೆಡ್ ಅಲರ್ಟ್ ಘೋóಇಸಲಾಗಿದೆ. ಸಹಸ್ರಧಾರಾ, ಮಲ್ದೇವತಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೂ ಮಿಸ್ಸೋರಿಯ ದಕ್ಷಿಣ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಮೋಲಿ ಜಿಲ್ಲೆಯ ಬೆರ್ಮು ಎಂಬ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 12 ಕುಟುಂಬಗಳನ್ನು ಮನೆಗಳಿಂದ ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಈ ಪ್ರದೇಶದ ಮೂಲಕ ಶಾಲೆಗಳಿಗೆ ಹೋಗುವ 150ಕ್ಕೂ ಹೆಚ್ಚು ಮಕ್ಕಳಿಗೆ ತೊಂದರೆಯಾಗಿದೆ. ಕಳೆದ 24 ಗಂಟೆಗಳಲ್ಲಿ ನೈನಿತಾಲ್ ಹಾಗೂ ತೆಹ್ರಿ ಗರ್ವಾಲ್ ಜಿಲ್ಲೆಯ ನರೇಂದ್ರ ನಗರದಲ್ಲಿ ಭಾರಿ ಮಳೆಯಾಗಿದೆ. ಈ ಎರಡೂ ಪ್ರದೇಶಗಳಲ್ಲಿ 120 ಮಿಲಿಮೀಟರ್ ಮಳೆ ಬಿದ್ದಿದೆ.