ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಹಿಂಸಾಚಾರ: ಸಾವಿನ ಸಂಖ್ಯೆ 16ಕ್ಕೆ

Update: 2023-07-09 02:26 GMT

Photo: PTI 

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯ ವೇಳೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ. ಜೂನ್ 8ಕ್ಕೆ ಪಂಚಾಯ್ತಿ ಚುನಾವಣೆಗಳ ಅಧಿಸೂಚನೆ ಘೋಷಣೆ ಬಳಿಕ 19 ಮಂದಿ ಜೀವ ಕಳೆದುಕೊಂಡಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯದ ವೇಳೆಗೆ ಒಟ್ಟು ಬಲಿಯಾವರ ಸಂಖ್ಯೆ 35ಕ್ಕೇರಿದೆ.

ಮುರ್ಶಿದಾಬಾದ್ ಹಾಗೂ ಉತ್ತರ ಮುರ್ಶಿದಾಬಾದ್ ನ ಕೂಚ್ಬೆಹಾರ್, ಉತ್ತರ ದಿಂಗಜ್ಪುರ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಮುರ್ಶಿದಾಬಾದ್ ಜಿಲ್ಲೆಯೊಂದರಲ್ಲೇ ಐದು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಉಳಿದಂತೆ ಕೂಚ್ಬೆಹಾರ್, ಉತ್ತರ ದಿಂಗಜ್ಪುರ ಹಾಗೂ ಮಾಲ್ಡಾದಲ್ಲಿ ಕ್ರಮವಾಗಿ ಮೂರು, ನಾಲ್ಕು ಹಾಗೂ ಒಬ್ಬರು ಬಲಿಯಾಗಿದ್ದಾರೆ.

ದಕ್ಷಿಣ ಬಂಗಾಳದ ನಾದಿಯಾ, ಪೂರ್ವ ಬುದ್ರ್ವಾನ್ ಮತ್ತು ದಕ್ಷಿಣ 24 ಪರಗಣಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಶನಿವಾರದ ಹಿಂಸಾಚಾರದಲ್ಲಿ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕನಿಷ್ಠ 200 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಮುರ್ಶಿದಾಬಾಧ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಪಘಾತ ವಿಭಾಗದಲ್ಲಿ ಹೆಚ್ಚುವರಿ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಟ್ಟು ಒಂಬತ್ತು ಮಂದಿ ಗಲಭೆಗಳಲ್ಲಿ ಮೃತಪಟ್ಟಿದ್ದಾರೆ. ಕಾಂಗ್ರೆಸ್ನ ಮೂವರು, ಬಿಜೆಪಿ ಹಾಗೂ ಸಿಪಿಎಂನ ತಲಾ ಇಬ್ಬರು ಕಾರ್ಯಕರ್ತರು ಸಾವಿಗೀಡಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News