ಮಾಲೆಗಾಂವ್ ಸ್ಫೋಟ ಪ್ರಕರಣ ಪ್ರಜ್ಞಾ ಸಿಂಗ್ ವಿರುದ್ಧ ವಾರಂಟ್ ಜಾರಿ
Update: 2024-03-11 17:08 GMT
ಹೊಸದಿಲ್ಲಿ : ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಬಿಜೆಪಿಯ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಸೋಮವಾರ ಜಾಮೀನು ಯೋಗ್ಯ ವಾರಂಟ್ ಜಾರಿಗೊಳಿಸಿದೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ನಿಯಮಗಳ ಅಡಿಯ ಪ್ರಕರಣದಲ್ಲಿ ಠಾಕೂರ್ ಹಾಗೂ ಇತರ ಆರು ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ. ಎನ್ ಐ ಎ ಪ್ರಸಕ್ತ ಸಿಆರ್ಪಿಸಿ ಅಡಿಯಲ್ಲಿ ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದೆ.
ಪುನರಾವರ್ತಿತ ಎಚ್ಚರಿಕೆಯ ಹೊರತಾಗಿಯೂ ತನ್ನ ಮುಂದೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಇತರರ ವಿರುದ್ಧ ಇಲ್ಲಿನ ವಿಶೇಷ ಎನ್ಐಎ ನ್ಯಾಯಾಲಯ ಜಾಮೀನು ಯೋಗ್ಯ ವಾರಂಟ್ ಜಾರಿಗೊಳಿಸಿದೆ.