ಪಶ್ಚಿಮ ಬಂಗಾಳ: ಪಂಚಾಯತ್ ಚುನಾವಣಾ ಹಿಂಸೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

Update: 2023-07-07 17:03 GMT

Photo: PTI

ಕೋಲ್ಕತಾ: ಪಶ್ಚಿಮಬಂಗಾಳ ಪಂಚಾಯತ್ ಚುನಾವಣೆಯ ಮುನ್ನಾ ದಿನವಾದ ಶುಕ್ರವಾರ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿದೆ ಹಾಗೂ ಕೂಚ್ಬೆಹಾರ್ ಜಿಲ್ಲೆಯಲ್ಲಿ ಗುಂಡೆಸತದಿಂದಾಗಿ ಬಿಜೆಪಿಯ ನಾಲ್ವರು ಬೆಂಬಲಿಗರು ಗಾಯಗೊಂಡಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ರಾಮನಗರ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಅರವಿಂದ ಮಂಡಲ್ ಹತ್ಯೆಯಾಗಿದ್ದಾರೆ. ಈತ ಪಂಚಾಯತ್ ಚುನಾವಣೆಯ ‘ಕೈ’ ಅಭ್ಯರ್ಥಿ ಹೃದಯ ಮೊಂಡಲ್ರ ಸೋದರ. ಹಿಂಸಾಚಾರ ಪೀಡಿತ ಮುರ್ಷಿದಾಬಾದ್ ಜಿಲ್ಲೆಗೆ ರಾಜ್ಯಪಾಲ ಸಿ.ವಿ. ಆನಂದಬೋಸ್ ಅವರ ಭೇಟಿಗೆ ಕೆಲವೇ ತಾಸುಗಳ ಮೊದಲು ಈ ಘಟನೆ ನಡೆದಿದೆ.

ಆರವಿಂದ್ ಮೊಂಡಲ್ ಅವರನ್ನು ಟಿಎಂಸಿ ಕಾರ್ಯಕರ್ತರು ಥಳಿಸಿ ಕೊಂದಿದ್ದಾರೆಂದು ಕಾಂಗ್ರೆಸ್ ಆಪಾದಿಸಿದೆ. ಆದರೆ ಟಿಎಂಸಿ ಈ ಆರೋಪಗಳನ್ನು ನಿರಾಕರಿಸಿದೆ.

ಇದರೊಂದಿಗೆ, ಮುರ್ಷಿದಾಬಾದ್ ಜಿಲ್ಲೆಯೊಂದರಲ್ಲೇ ಪಂಚಾಯತ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಿಂಸೆಗೆ ಬಲಿಯಾದವರ ಸಂಖ್ಯೆ ಐದಕ್ಕೇರಿದೆ.ಪಶ್ಚಿಮಬಂಗಾಳದ ರಾಜ್ಯದಲ್ಲಿ ಪಂಚಾಯತ್ ಚುನಾವಣೆಗೆ ನಾಮತ್ರ ಸಲ್ಲಿಕೆ ರಕ್ರಿಯೆ ಆರಂಭಗೊಂಡಾಗಿನಿಂದ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಕೂಚ್ಬೆಹಾರ್ನ ದಿನ್ಹಟಾ ಪ್ರದೇಶದಲ್ಲಿ ಶಂಕಿತ ಟಿಎಂಸಿ ಕಾರ್ಯಕರ್ತರಿಂದ ನಾಡಬಾಂಬ್ ದಾಳಿ ಹಾಗೂ ಗುಂಡೆಸತದಿಂದಾಗಿ ನಾಲ್ವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಈ ಮಧ್ಯೆ ಮುರ್ಷಿದಾಬಾದ್ನ ರಾಜಕೀಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ರಾಜ್ಯಪಾಲರು ಭೇಟಿ ನೀಡಲಿದ್ದಾರೆಂದು ರಾಜಭವನದ ಮೂಲಗಳು ತಿಳಿಸಿವೆ. ಈ ಮೊದಲು ಅವರು ರಾಜಕೀಯ ಹಿಂಸಾಚಾರದಿದ ತತ್ತರಿಸರದಕ್ಷಿಣ 24 ಪರಗಣ ಜಿಲ್ಲೆಯ ಭಾನಗರ್, ಕ್ಯಾನಿಂಗ್ ಹಾಗೂ ಬಸಂತಿ ಪಟ್ಟಣಗಳಿಗೆ ಭೇಟಿ ನೀಡಿದ್ದರು.

ಪಶ್ಚಿಮಬಂಗಾಳದ ಪಂಚಾಯತ್ಗೆ ಜುಲೈ 8ರಂದು ಮತದಾನ ನಡೆಯಲಿದೆ ಗುರುವಾರ ಚುನಾವಣಾ ಪ್ರಚಾರ ಕೊನೆಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News