ಆಂಧ್ರ, ಬಿಹಾರಕ್ಕೆ ವಿಶೇಷ ಸ್ಥಾನಮಾನ ಭರವಸೆಯನ್ನುಪ್ರಧಾನಿ ಈಡೇರಿಸುತ್ತಾರೆಯೇ?: ಕಾಂಗ್ರೆಸ್ ಪ್ರಶ್ನೆ

Update: 2024-06-06 15:34 GMT

ನರೇಂದ್ರ ಮೋದಿ , ಜೈರಾಮ್ ರಮೇಶ್ | PC : ANI

ಹೊಸದಿಲ್ಲಿ: ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ಈಡೇರಿಸುವಿರಾ? ಎಂದು ಕಾಂಗ್ರೆಸ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಮೋದಿ 3.0 ಸರಕಾರ ರಚನೆಯಾಗಲಿದೆ ಎಂದು ಪದೇ ಪದೇ ಪ್ರತಿಪಾದಿಸಲಾಗುತ್ತಿದೆ. ಆದರೆ, ವಾಸ್ತವವೆಂದರೆ ಈ ಬಾರಿ ಇದು ಮೋದಿ ಮೂರನೇ ಒಂದು ಸರಕಾರ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಹೇಳಿಕೆಯಲ್ಲಿ ಜೈರಾಮ್ ರಮೇಶ್ ಅವರು, ಪ್ರಧಾನಿ ಅವರಿಗೆ ಕಾಂಗ್ರೆಸ್ ನಿಂದ ನಾಲ್ಕು ಪ್ರಶ್ನೆಗಳಿಗೆವೆ. ಎರಡು ಪ್ರಶ್ನೆ ಆಂಧ್ರಪ್ರದೇಶಕ್ಕೆ ಹಾಗೂ ಎರಡು ಪ್ರಶ್ನೆ ಬಿಹಾರಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ.

2014 ಎಪ್ರಿಲ್ 30ರಂದು ಪವಿತ್ರ ನಗರ ತಿರುಪತಿಯಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು, ಇಂದರಿಂದ ಹೂಡಿಕೆ ಹೆಚ್ಚಾಗುತ್ತದೆ ಎಂದು ನೀವು ಭರವಸೆ ನೀಡಿದ್ದೀರಿ.ಆದರೆ, 10 ವರ್ಷಗಳು ಕಳೆದರೂ ಅದು ಈಡೇರಿಲ್ಲ. ಈಗ ಈ ಭರವಸೆ ಈಡೇರುತ್ತದೆಯೇ ? ಪ್ರಧಾನಿ ಅವರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿದ್ದಾರೆಯೆ ? ಎಂದು ಅವರು ಪ್ರಶ್ನಿಸಿದ್ದಾರೆ.

ವಿಶಾಖಪಟ್ಟಣಂದಲ್ಲಿರುವ ಉಕ್ಕಿನ ಘಟಕವನ್ನು ಖಾಸಗೀಕರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಎಲ್ಲಾ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈಗ ವಿಶಾಖಪಟ್ಟಣ ಉಕ್ಕಿನ ಘಟಕವನ್ನು ಖಾಸಗೀಕರಣಗೊಳಿಸುವುದನ್ನು ನೀವು ನಿಲ್ಲಿಸುತ್ತೀರಾ ? ಎಂದು ಅವರು ಹೇಳಿದ್ದಾರೆ.

2014ರ ಚುನಾವಣಾ ಪ್ರಚಾರದ ಸಂದರ್ಭ ನೀಡಿದ ಭರವಸೆಗಳು ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಮ್ಮ ಮಿತ್ರ ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರು 10 ವರ್ಷದ ಬೇಡಿಕೆಯನ್ನು ಈಡೇರಿಸುತ್ತೀರಾ ? ಎಂದು ಅವರು ಕೇಳಿದ್ದಾರೆ.

‘‘ನಾವು ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಬೇಕೆಂದು ಒತ್ತಾಯಿಸಿದ್ದೇವೆ. ನೀತಿಶ್ ಕುಮಾರ್ ಅವರು ಕೂಡ ಇದನ್ನು ಬೆಂಬಲಿಸಿದ್ದಾರೆ. ಬಿಹಾರದಲ್ಲಿ ನಡೆಸಿದಂತೆ ಇಡೀ ದೇಶದಲ್ಲಿ ಜಾತಿ ಗಣತಿ ನಡೆಸುವುದಾಗಿ ನೀವು ಭರವಸೆ ನೀಡುತ್ತೀರಾ?’’ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News