ಜಾಗತಿಕ ಕನ್ನಡ ಕವನ ಸ್ಪರ್ಧೆ ; ಮುಕ್ತ ಅವಕಾಶ
ಜಾಗತಿಕ ಕನ್ನಡ ಕವನ ಸ್ಪರ್ಧೆಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಸೂರು ಅಸೋಸಿಯೇಷನ್ ಮುಂಬೈಗೆ 90 ವರ್ಷ ತುಂಬುತ್ತಿರುವುದರಿಂದ ಈ ಸಂಭ್ರಮದ ಆಚರಣೆಯ ಪ್ರಯುಕ್ತವಾಗಿ ಮೈಸೂರು ಅಸೋಸಿಯೇಷನ್ ಜಾಗತಿಕ ಕನ್ನಡ ಕವನ ಸ್ಪರ್ಧೆಯನ್ನು ಆಯೋಜಿಸಿದೆ.
►ಈ ಸ್ಪರ್ಧೆಯಲ್ಲಿ ಇಡೀ ವಿಶ್ವದಾದ್ಯಂತ ಇರುವ ಎಲ್ಲಾ ಕನ್ನಡಿಗರು ಭಾಗವಹಿಸಬಹುದಾಗಿದೆ. ►ಯಾವುದೇ ವಿಷಯದ ಕುರಿತಂತೆ ಕವಿತೆಗಳನ್ನು ರಚಿಸಬಹುದಾಗಿದೆ. ►ಇಲ್ಲಿ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
ಪ್ರಥಮ ಬಹುಮಾನ : ರೂ. 10,000/-,
ದ್ವಿತೀಯ ಬಹುಮಾನ : ರೂ. 5,000/-
ತೃತೀಯ ಬಹುಮಾನ : ರೂ. 3,000/-,
ಪ್ರೋತ್ಸಾಹಕ ಬಹುಮಾನ : ರೂ. 1,000/- (ಇಬ್ಬರಿಗೆ)
ಸ್ಪರ್ಧೆಯ ನಿಯಮಾವಳಿಗಳು : 1.ಕವನಗಳು ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು.
2.ಕವನಗಳು ಸುಮಾರು 30 ಸಾಲಿನ ಮಿತಿಯಲ್ಲಿರಲಿ. ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಪುಟವಾಗಿ ಬರೆದು ಕಳುಹಿಸಿ. (ಹಸ್ತ ಲಿಖಿತ ಯಾ ಕಂಪ್ಯೂಟರ್ ಮುದ್ರಿತ). ಇಮೈಲ್ ಮೂಲಕವೂ ಕಳುಹಿಸಬಹುದು.
3.ಲೇಖಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇಮೈಲ್ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸಿ.
4. ಒಬ್ಬರು ಒಂದೇ ಕವನವನ್ನು ಬರೆದು ಕಳುಹಿಸಬೇಕು.
5.ಸ್ಪರ್ಧೆಗೆ ಬಂದ ಕವನಗಳನ್ನು ಮರಳಿ ಕಳಿಸಲಾಗುವುದಿಲ್ಲ.
6.ತೀರ್ಪುಗಾರರ ತೀರ್ಮಾನವೇ ಅಂತಿಮ.
7.ಕವನಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ 15.02.2016
8.ತೀರ್ಪುಗಾರರ ತೀರ್ಮಾನವನ್ನು ಏಪ್ರಿಲ್ 15, 2016 ಕ್ಕೆ ಜಾಹೀರುಗೊಳಿಸಲಾಗುವುದು.
ಆಯ್ಕೆಯಾದ ಕವನಗಳನ್ನು ಮೈಸೂರು ಅಸೋಸಿಯೇಷನ್‌ನ ಮಾಸಿಕ ನೇಸರು ಪತ್ರಿಕೆ ಹಾಗೂ ವೆಬ್‌ಸೈಟ್ www.mysoreassociation.in ಅಲ್ಲಿ ಪ್ರಕಟಿಸಲಾಗುವುದು.
ಕವನ ಕಳುಹಿಸಬೇಕಾದ ವಿಳಾಸ (Postal Address :) The Mysore Association, Mumbai, No. 393, Bhau Daji Road, Matunga, Mumbai - 400 019. Tel: 022-24024647 / 24037065. Email: kavana.nesaru@gmail.com