ಹರೀಶ್‌ರಾವತ್‌ರಿಗೆ ಇನ್ನೊಂದು ಹಿನ್ನಡೆ: ಸಿಬಿಐ ತನಿಖೆ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ

Update: 2016-05-21 05:58 GMT

 ನೈನಿತಾಲ್, ಮೇ 21: ಉತ್ತರಾಖಂಡದ ಉಚ್ಚನ್ಯಾಯಾಲಯ ಇಂದು ಮುಖ್ಯಮಂತ್ರಿ ಹರೀಶ್‌ರಾವತ್‌ರ ವಿರುದ್ಧ ಸಿಬಿಐ ನಡೆಸುತ್ತಿರುವ ಸ್ಟಿಂಗ್ ಆಪರೇಶನ್ ತನಿಖೆಯನ್ನು ಕೈಬಿಡಲು ನಿರಾಕರಿಸಿದೆ. ಸ್ಟಿಂಗ್ ನಡೆಸಲಾದ ವೀಡಿಯೊದಲ್ಲಿ ರಾವತ್‌ರು ಬಂಡಾಯ ಕಾಂಗ್ರೆಸ್ ಶಾಸಕರ ಬೆಂಬಲ ಗಳಿಸಲಿಕ್ಕಾಗಿ ಒಪ್ಪಂದ ಮಾಡುತ್ತಿರುವಂತೆ ತರಿಸಲಾಗಿದೆ. ಆದರೆ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಸರ್ವೇಶ್‌ಕುಮಾರ್ ಗುಪ್ತ ಈ ಸಂದರ್ಭದಲ್ಲಿ ಸ್ಟಿಂಗ್ ವೀಡಿಯೊದ ಸಿಬಿಐ ತನಿಖೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾವತ್‌ರು ಅರ್ಜಿ ಸಲ್ಲಿಸಿ ತನಿಖೆಯನ್ನು ರದ್ದು ಪಡಿಸಬೇಕೆಂದು ವಿನಂತಿಸಿದ್ದರು. ಸಿಬಿಐ ಸಮನ್ಸ್ ಕಳುಹಿಸಿ ಅದರ ಮುಂದೆ ಮೇ ಒಂಬತ್ತರಂದು ಅದರ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಮುಖ್ಯಮಂತ್ರಿ ಆರೋಗ್ಯ ಕಾರಣಗಳನ್ನು ಮುಂದಿಟ್ಟು ಹಾಜರಾಗಿರಲಿಲ್ಲ. ಉಚ್ಚನ್ಯಾಯಾಲಯ ತನಿಖೆಗೆ ನೆರವಾಗುವಂತೆ ಸೂಚಿಸಿದೆ. ಮುಖ್ಯಮಂತ್ರಿ ಕಾರ್ಯಾಲಯದೊಂದಿಗೆ ಗೌರವದಿಂದ ನಡೆದುಕೊಳ್ಳಬೇಕೆಂದೂ ಸಿಬಿಐಗೆ ಹೇಳಿದೆ. ಮುಂದಿನ ವಿಚಾರಣೆ ಮೇ 31ಕ್ಕೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News