ಸೌರ ಶಕ್ತಿ ಯೋಜನೆಗಳಿಗೆ ವಿಶ್ವಬ್ಯಾಂಕ್‌ನಿಂದ 1 ಶತಕೋಟಿ ಡಾಲರ್ ನೆರವಿನ ಭರವಸೆ
Update: 2016-06-30 19:06 GMT
ಹೊಸದಿಲ್ಲಿ, ಜೂ.30: ಭಾರತದಲ್ಲಿ ಸೌರ ವಿದ್ಯುಚ್ಛಕ್ತಿ ಸಾಮರ್ಥ್ಯ ದ ವಿಸ್ತರಣೆಗೆ 1 ಶತಕೋಟಿ ಡಾಲರ್ ಅನುದಾನವನ್ನು ಗುರುವಾರ ವಿಶ್ವಬ್ಯಾಂಕ್ ಘೋಷಿಸಿದೆ.ವಿಶ್ವದಾದ್ಯಂತ ಸೌರ ಶಕ್ತಿಯ ಹೆಚ್ಚಳದಲ್ಲಿ ಭಾಗೀದಾರಿಕೆಗಾಗಿ ಭಾರತ ನೇತೃತ್ವದ 121 ರಾಷ್ಟ್ರ ಒಳಗೊಂಡಿರುವ , ಅಂತಾರಾಷ್ಟ್ರೀಯ ಸೌರ ಮೈತ್ರಿ ಕೂಟದೊಂದಿಗೆ ವಿಶ್ವಬ್ಯಾಂಕ್ ಒಪ್ಪಂದಕ್ಕೆ ಸಹಿ ಹಾಕಿದೆ . 2030 ರೊಳಗಾಗಿ 1ಲಕ್ಷ ಕೋಟಿ ಡಾಲರ್ ಬಂಡವಾಳ ಸಂಗ್ರಹಿಸುವ ಗುರಿಯನ್ನು ಅದು ಹೊಂದಿದೆ. ಭಾರತ ಪ್ರವಾಸದಲ್ಲಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯೊಂಗ್ ಕಿಮ್,ವಿತ್ತ ಸಚಿವ ಅರುಣ್ ಜೇಟ್ಲೀ ಮತ್ತು ಇಂಧನ ಸಚಿವ ಪೀಯೂಷ್ ಗೋಯಲ್‌ರ ಉಪಸ್ಥಿತಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತದ ಮಹತ್ವಾಕಾಂಕ್ಷೆಯ ಸೌರ ಉದ್ಯಮಶೀಲತೆಯ ಮೂಲಕ ಭವಿಷ್ಯದ ಹೂಡಿಕೆಗಾಗಿ 1 ಶತಕೋಟಿ ಡಾಲರ್ ಗಿಂತಲೂ ಅಧಿಕ ಆರ್ಥಿಕ ನೆರವು ನೀಡುವುದಾಗಿ ವಿಶ್ವಬ್ಯಾಂಕ್ ಘೋಷಿಸಿದೆ.