ಅಪ್ಪ ನನಗಿಷ್ಟ

Update: 2016-07-05 05:15 GMT

ಮನೆಯ ಚಪ್ಪಲಿ ಸ್ಟಾಂಡಿನತ್ತ ಕಣ್ಣು ಹೊರಳಿತು;
ಅಲ್ಲಿ ನಾನಿದ್ದೆ, ದುಬಾರಿ ಬ್ರಾಂಡೆಡ್ ಶೂವಿನಲ್ಲಿ;
ತಂಗಿಯೂ ಇದ್ದಳು,ನನಗಿಂತ ಏನೂ ಕಮ್ಮಿ ಇರದೇ;
ಅಮ್ಮನದೂ ಪರವಾಗಿಲ್ಲ, ಚಪ್ಪಲಿ ಹೊಸತೇ..

ಇನ್ನೊಂದು ಚಪ್ಪಲಿದೆ ಅಲ್ಲಿ,
ವರುಷ ಕಳೆದ, ಸವೆದು ಮುಗಿದ
ಹರಿದ ಕಡೆಯೆಲ್ಲ ಹೊಲಿಗೆಗಳು ತುಂಬಿದ್ದು;
ಅದು ಮನೆಯ ಯಜಮಾನ ಅಪ್ಪನದು

ಅಪ್ಪ ಯಾವತ್ತೂ ಹಾಗೇ,
ನನಗೆ ದುಬಾರಿ ಶೂ ಕೊಡಿಸಿ ಹೆಮ್ಮೆ ಪಡುವವರು
ತಂಗಿ ಹೊಸ ಚಪ್ಪಲಿ ಧರಿಸಿ ಕುಣಿವಾಗ 
ಪಳಪಳ ಹೊಳೆವವರು
ಅಮ್ಮನ ಮೊಗದ ನಗುವಿನಲ್ಲೇ
ತನ್ನ ಸುಖ ಹುಡುಕುವವರು

ಮನೆಮಂದಿಗೆಲ್ಲ  ಹಬ್ಬದ ದಿನ
ಹೊಸ ಹೊಸ ಬಟ್ಟೆ-ಚಪ್ಪಲುಗಳ ಕೊಡಿಸಿ
ಅದೇ ಹಳೇ ಲುಂಗಿ, ಇಸ್ತ್ರಿ ಕಾಣದ ಅಂಗಿ, 
ಹರಿದ ಚಪ್ಪಲಿ ಧರಿಸಿ 
ಇತರರ ಸಂಭ್ರಮದಲ್ಲೇ ತಾನು ಖುಷಿಯಾಗಿರಲು
ಅಪ್ಪನಿಗಷ್ಟೇ  ಸಾಧ್ಯ;
ಅದಕ್ಕೇ ಮಿಕ್ಕೆಲ್ಲದಕಿಂತ ಅಪ್ಪ ನನಗಿಷ್ಟ!

Writer - ಸಾಹುಕಾರ ಅಚ್ಚು

contributor

Editor - ಸಾಹುಕಾರ ಅಚ್ಚು

contributor

Similar News

ಸಲ್ಮಾತು