ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿಲ್ಲ: ಕೇಂದ್ರ ಸಚಿವೆ ಅನುಪ್ರಿಯ ಪಟೇಲ್
ಮಿರ್ಜಾಪುರ,ಜುಲೈ 16: ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್‌ರನ್ನು ಟೀಕಿಸಿದ ಕೇಂದ್ರ ಆರೋಗ್ಯ ಮತ್ತುಕುಟುಂಬಕಲ್ಯಾಣ ಸಹಾಯಕ ಸಚಿವೆ ಅನುಪ್ರಿಯಾ ಪಟೇಲ್ "ಉತ್ತರಪ್ರದೇಶದಲ್ಲಿ ಶೀಲಾರಿಗೆ ಯಾವುದೇ ಇತಿಹಾಸವಿಲ್ಲ. ಮುಖ್ಯಮಂತ್ರಿ ಆಗಲು ಉತ್ತರಪ್ರದೇಶದೊಂದಿಗೆ ನಿಕಟ ಸಂಬಂಧವಿರುವವರೇ ಆಗಬೇಕು. ಆದ್ದರಿಂದ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ದೂರದಿಂದಲೂ ಕಾಣಿಸುವುದಿಲ್ಲ" ಎಂದು ಹೇಳಿದ್ದಾರೆಂದು ವರದಿಯಾಗಿದೆ.
ಅವರು ಮಿರ್ಜಾಪುರ ರೈಲು ನಿಲ್ದಾಣದಲ್ಲಿ ಶನಿವಾರ ಮೆಮೊ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತಾಡುತ್ತಿದ್ದರು."ಶೀಲಾ ದೀಕ್ಷಿತ್ ತನ್ನಮೇಲೆ ಟ್ಯಾಂಕರ್ ಹಗರಣದ ಕಲೆ ಅಂಟಿಸಿಕೊಂಡು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಬಹಳ ಸಂಘರ್ಷ ಮಾಡಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರುವ ದೂರದ ಸಾಧ್ಯತೆ ಕೂಡಾ ಈಗ ಗೋಚರಿಸುತ್ತಿಲ್ಲ.ಆದರೆ ಬಿಜೆಪಿ ಮತ್ತು ತನ್ನ ಪಕ್ಷವಾದ ಅಪ್ನಾ ದಳ್ ಜೊತೆಗೂಡಿ ಚುನಾವಣೆಯಲ್ಲಿ ಹೋರಾಡಲಿದೆ ಎಂದು ಅನುಪ್ರಿಯ ಹೇಳಿದ್ದಾರೆಂದು ವರದಿ ತಿಳಿಸಿದೆ.