ಶಿಕ್ಷೆಯ ಪ್ರಮಾಣ ಪ್ರಕಟನೆ ಸೆ.2ಕ್ಕೆ ಮುಂದೂಡಿಕೆ
Update: 2016-08-04 17:24 GMT
ಹೈದರಾಬಾದ್, ಆ.4: ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಮಾಜಿ ಮದ್ಯದ ದೊರೆ ವಿಜಯ ಮಲ್ಯ ವಿರುದ್ಧ ಜಿಎಂಆರ್ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವು ದಾಖಲಿಸಿರುವ ಎರಡು ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟನೆಯನ್ನು ಗುರುವಾರ ಇಲ್ಲಿಯ ಮೂರನೇ ವಿಶೇಷ ನ್ಯಾಯಾಲಯವು ಸೆ.2ಕ್ಕೆ ಮುಂದೂಡಿದೆ.
ತಲಾ 50 ಲ.ರೂ.ಗಳ ಈ ಚೆಕ್ ಅಮಾನ್ಯ ಪ್ರಕರಣದಲ್ಲಿ ಮಲ್ಯ ಮತ್ತು ಇತರರು ದೋಷಿಗಳೆಂದು ನ್ಯಾ.ಎಂ.ಕೃಷ್ಣರಾವ್ ಅವರು ಎ.20ರಂದು ಘೋಷಿಸಿದ್ದರು.
ಕಿಂಗ್‌ಫಿಷರ್ ಕಂಪೆನಿಯ ಹಿರಿಯ ಅಧಿಕಾರಿ ಎ.ರಘುನಾಥನ್ ವಿರುದ್ಧ ಹೊರ ಡಿಸಲಾಗಿರುವ ವಾರಂಟ್‌ಗಳ ಕುರಿತ ವರದಿಯು ಇನ್ನೂ ಕೈಸೇರಿಲ್ಲ, ಈ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಣೆಯು ಗುರುವಾರ ಆರನೇ ಬಾರಿ ಮುಂದೂಡಲ್ಪಟ್ಟಿದೆ.