ಪ್ರಧಾನಿ ಮೋದಿ ಹುಕುಂನ ಫಲಶ್ರುತಿ :ಪಂಜಾಬ್‌ ನ ಗೋರಕ್ಷಕ ದಳದ ಮುಖ್ಯಸ್ಥನ ವಿರುದ್ಧ ಎಫ್‌ಐಆರ್‌

Update: 2016-08-08 07:41 GMT

ಅಮೃತಸರ, ಆ.8: ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದ ಬೆನ್ನಲ್ಲೆ ಪಂಜಾಬ್‌ ಪೊಲೀಸರು ಗೋರಕ್ಷಕ ದಳದ ಮುಖ್ಯಸ್ಥ ಸತೀಶ್‌ ಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

 ಟ್ರಕ್‌  ಚಾಲಕನೊಬ್ಬನು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆಂಬ ಆರೋಪದಲ್ಲಿ  ಆತನನ್ನು ಸತೀಶ್‌ ಕುಮಾರ್‌  ಅವರು  ತನ್ನ ಇಬ್ಬರು ಸಹಚರರೊಂದಿಗೆ ಹಿಡಿದು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್‌ ಆಗಿತ್ತು. 
ಈ ಘಟನೆ ನಡೆದು ತಿಂಗಳು ಉರುಳಿದೆ. ಆದರೆ ಪೊಲೀಸರು ಪ್ರಧಾನಿ ಮೋದಿ ಅವರು ನೀಡಿದ ಆದೇಶದ ಬಳಿಕ ಕಾರ್ಯಾಚರಣೆಗೆ ಇಳಿದಿದ್ದಾರೆ.
ಪ್ರಧಾನಿ ಮೋದಿ ಅವರು ರವಿವಾರ ತೆಲಂಗಾಣದಲ್ಲಿ  ನೀಡದ ಹೇಳಿಕೆಯಲ್ಲಿ ನಕಲಿ ಗೋ ರಕ್ಷಕರ ಬಗ್ಗೆ ಜಾಗೃತಿ ಅಗತ್ಯ. ಅವರು ದೇಶವನ್ನು ಒಡೆಯುತ್ತಾರೆ. ಅವರು ಗೋರಕ್ಷಣೆಯ ವಿಚಾರದಲ್ಲಿ ಏನನ್ನು ಮಾಡುವುದಿಲ್ಲ. ಪೊಲೀಸರು ಇಂತಹ ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದರು.
ದಿಲ್ಲಿಯಲ್ಲಿ  ಶನಿವಾರ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ  " ಗೋರಕ್ಷಕರು ಅಥವಾ ದನಗಳ ರಕ್ಷಕರು ಎಂದು ಕರೆಸಿಕೊಳ್ಳುವರಲ್ಲಿ ಶೇ 70ರಿಂದ 80ರಷ್ಟು ಮಂದಿ  ಸಮಾಜಘಾತಕ ಶಕ್ತಿಗಳು.  ಇಂತವರು ತಾವು  ಮಾಡುವ  ಪಾಪದ ಕೃತ್ಯವನ್ನು  ಮರೆ ಮಾಚಲು ಗೋರಕ್ಷಕರ ಮುಖವಾಡ ಧರಿಸಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News