ಸುಶ್ಮಾ ರ ಕೈ ಹಿಡಿದು ಸಂಸತ್ತಿನ ಹೊರಗೆ ನಿಂತಿರುವ ಇವರಾರು ಗೊತ್ತೇ ?

Update: 2016-08-11 10:20 GMT

ಹೊಸದಿಲ್ಲಿ , ಆ. 11 : ಟ್ವಿಟ್ಟರ್ ಮೂಲಕ ಜನಪ್ರಿಯತೆ ಹಾಗು ಸುದ್ದಿಯಲ್ಲಿರುವುದರಲ್ಲಿ  ಸುಶ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿ ಅವರಿಗೇ ಸ್ಪರ್ಧೆ ನೀಡುತ್ತಿದ್ದಾರೆ. ಪ್ರತಿದಿನ ಒಂದಿಲ್ಲೊಂದು ವಿಷಯದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸುವ ಸುಶ್ಮಾ ಅವರು ಈಗ ಜನಪ್ರಿಯತೆಯಲ್ಲಿ ಮೋದಿ ಸಂಪುಟ ಸಚಿವರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. 

ಗುರುವಾರ ಸುಶ್ಮಾ ಟ್ವಿಟ್ಟರ್ ನಲ್ಲಿ ಹೊಸ ಅಚ್ಚರಿಯೊಂದನ್ನು ನೀಡಿದರು. ಸಂಸತ್ತಿನ ಹೊರಗೆ ತಮ್ಮ ಪತಿ ಸ್ವರಾಜ್ ಕೌಶಲ್ ಅವರೊಂದಿಗೆ ಕೈ ಕೈ ಹಿಡಿದು ನಿಂತ ಫೋಟೋ ಹಾಕಿ ಅವರು ಚರ್ಚೆಯಲ್ಲಿದ್ದಾರೆ. ದೇಶದ ಅತ್ಯಂತ ಕಿರಿಯ ( 37 ನೇ ವಯಸ್ಸಿನಲ್ಲಿ ) ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ, ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ  ಸ್ವರಾಜ್ ಸುಪ್ರೀಂ ಕೋರ್ಟ್ ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾರೆ. 2000 ದಿಂದ 2004 ರವರೆಗೆ ಸುಶ್ಮಾ ಹಾಗು ಅವರ ಪತಿ ರಾಜ್ಯಸಭೆಯಲ್ಲಿ ಒಟ್ಟಿಗೆ ಇದ್ದರು. 

ಫೋಟೋ ನೋಡಿ ಒಬ್ಬರು ಸುಶ್ಮಾಗೆ ಪ್ರಶ್ನೆಯೊಂದನ್ನು ಕೇಳಿಯೇ ಬಿಟ್ಟಿದ್ದಾರೆ. " ನೀವು ಈಗ ನಿಮ್ಮ ಪತಿ ಜೊತೆ ಇಲ್ಲವೇ ? ಸಾಧ್ಯವಿದ್ದರೆ ಮಾತ್ರ ಉತ್ತರ ಕೊಡಿ" ಎಂದು ರಕ್ಷಾ ಸಿಂಗ್ ಎಂಬವರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಸುಶ್ಮಾ " ಮನೆಯಲ್ಲಿ ಜೊತೆಗಿದ್ದೇವೆ, ಸಂಸತ್ತಿನಲ್ಲಿ ಇಲ್ಲ " ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News