ಚಿತೆಯಲ್ಲಿ ಮಹಿಳೆಯ ಜೀವಂತ ದಹನ..?

Update: 2017-02-28 18:19 GMT

ಲಕ್ನೊ, ಫೆ.28: 21ರ ಹರೆಯದ ಮಹಿಳೆಯೋರ್ವಳನ್ನು ಚಿತೆಯಲ್ಲಿ ಜೀವಂತ ದಹಿಸಲಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನೋಯ್ಡದ ಈ ಮಹಿಳೆಯನ್ನು ಚಿಕಿತ್ಸೆಗಾಗಿ ಗ್ರೇಟರ್ ನೋಯ್ಡೆದ ಶಾರ್ದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ಪ್ರಮಾಣಪತ್ರ ನೀಡಿದ ಬಳಿಕ ಆಕೆಯ ಪತಿ , ಪತ್ನಿಯ ಶವದ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾನೆ.

ಆಕೆಯ ದೇಹವನ್ನು ಚಿತೆಯ ಮೇಲಿರಿಸಿದಾಗ ಆಕೆ ಉಸಿರಾಡುತ್ತಿದ್ದಳು. ತನ್ನನ್ನು ಜೀವಂತ ದಹಿಸಲಾಗುತ್ತಿರುವ ಆಘಾತದಿಂದ ಮೃತಪಟ್ಟಿದ್ದಾಳೆ ಎಂದು ಇಬ್ಬರು ವೈದ್ಯರನ್ನೊಳಗೊಂಡ ಸಮಿತಿ ವರದಿ ನೀಡಿರುವುದಾಗಿ ಪೊಲೀಸ್ ವರಿಷ್ಠ ರಾಜೇಶ್ ಪಾಂಡೆ ತಿಳಿಸಿದ್ದಾರೆ.

ಈ ಮಹಿಳೆ ಶ್ವಾಸಕೋಶದ ಸೋಂಕು ರೋಗದಿಂದ ರವಿವಾರ ರಾತ್ರಿ 11:45ಕ್ಕೆ ಮೃತಪಟ್ಟಿದ್ದಾಳೆ ಎಂದು ಶಾರ್ದಾ ಆಸ್ಪತ್ರೆಯ ವೈದ್ಯರು ಪ್ರಮಾಣಪತ್ರ ನೀಡಿದ್ದರು. ಮರುದಿನ ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆಗೆ ಈಕೆಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News