ಪ್ರಾಣ ಪಣಕಿಟ್ಟು ಮಾವೋವಾದಿಗಳ ವಿರುದ್ಧ ಹೋರಾಡಿದ್ದಕ್ಕೆ ಇವರಿಗೆ ಸಿಕ್ಕ ಬಹುಮಾನ 40 ರೂಪಾಯಿ!
ಛತ್ತೀಸ್‌ಗಡ, ಮಾ. 30: ತಮ್ಮಪ್ರಾಣವನ್ನು ಪಣವಾಗಿಟ್ಟು ಮಾವೋವಾದಿಗಳೊಂದಿಗೆ ಹೋರಾಡಿದ ಪೊಲೀಸರಿಗೆ ಛತ್ತೀಸ್ ಗಡ ಸರಕಾರ ಕೊಡುವ ಪ್ರತಿಫಲ ಎಷ್ಟುಗೊತ್ತೇ? . 40ರೂಪಾಯಿ, 50ರೂಪಾಯಿ, 75ರೂಪಾಯಿ ಮತ್ತು ಹೆಚ್ಚೆಂದರೆ 100-150ರ ರೂಪಾಯಿಗಳು.
ಮಾವೋವಾದಿಗಳೊಂದಿಗೆ ಘರ್ಷಣೆ ನಡೆಸುವ ಪೊಲೀಸರಿಗೆ ಛತ್ತೀಸ್ ಗಡ ಸರಕಾರ ಕೊಡುವ ನಗದು ಬಹುಮಾನದ ಮೊತ್ತ ಇದು. ದಂತೇವಾಡದಲ್ಲಿ ಛತ್ತೀಸ್‌ಗಡ ಪೊಲೀಸ್ ಕಾನ್ಸ್‌ಟೇಬಲ್ ರಾಮ್‌ಸಾಯಿ ಬಹುಮಾನದ ಮೊತ್ತವನ್ನು ಹೇಳಿ ನಗುತ್ತಾರೆ. " ಕಳೆದ ಕೆಲವು ವರ್ಷಗಳಿಂದ ಮಾವೋವಾದಿಗಳ ಶೋಧ ಕಾರ್ಯಚರಣೆಗಾಗಿ ಎರಡು ದಿನ ಕಾಡಿನಲ್ಲಿದ್ದೆವು. ಬಹಳ ಆಯಾಸಗೊಂಡಿದ್ದೆವು. ಆಗ ಮಾವೋವಾದಿಗಳು ದಾಳಿಮಾಡಿದ್ದರು. ನಾವು ಕೂಡಾ ಪ್ರತಿದಾಳಿ ಮಾಡಿದೆವು. ನಮ್ಮ ಪ್ರಾಣವನ್ನುಲೆಕ್ಕಿಸದೆ ಕೆಲವು ಮಾವೋವಾದಿಗಳನ್ನು ಕೊಂದು ಹಾಕಿದ್ದೆವು" ಎಂದು ಅವರು ಹೇಳಿದ್ದಾರೆ.
"ಅಂದು ಪೊಲೀಸ್ ಅಧೀಕ್ಷಕರು ಇಡೀ ಪೊಲೀಸರ ತಂಡವನ್ನು ಶ್ಲಾಘಿಸಿದರು. ಬಹುಮಾನವನ್ನು ಕೂಡಾ ಘೋಷಿಸಲಾಯಿತು. ಆದರೆ ಒಂದು ತಿಂಗಳ ಬಳಿಕ ಬಹುಮಾನ ಸಿಕ್ಕಿದಾಗ ನನಗೆ ನಾಚಿಕೆಯಾಯಿತು. ನನಗೆ ನನ್ನ ಸಾಹಸಕ್ಕಾಗಿ 40 ರೂಪಾಯಿ ಬಹುಮಾನ ಕೊಡಲಾಗಿತ್ತು" ಎಂದು ರಾಮ್‌ಸಾಯಿ ಹೇಳುತ್ತಾರೆ.
ಕಳೆದ ಎರಡುವರ್ಷಗಳ ಲೆಕ್ಕವನ್ನುನೋಡಿದರೆ ಬಸ್ತರ್‌ನಲ್ಲಿ ಮಾವೋವಾದಿಗಳೊಂದಿಗೆ ಘರ್ಷಣೆ ನಡೆಸಿದ 1362 ಪೊಲೀಸರಿಗೆ ಬೇರೆ ಬೇರೆ ಸಂದರ್ಭದಲ್ಲಿ ಸಾಹಸ ಮೆರೆದದ್ದಕ್ಕಾಗಿ ಪುರಸ್ಕರಿಸಲಾಗಿದೆ.ಆದರೆಶೇ. 75ರಷ್ಟು ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ 100ರೂಪಾಯಿ ಬಹುಮಾನ ನೀಡಲಾಗಿದೆ. 344 ಕಾನ್ಸ್‌ಟೇಬಲ್‌ಗಳಿಗೆ ಪ್ರಶಂಸಾ ಪತ್ರ ನೀಡಲಾಗಿದೆ. ಹಾಗೂ 91 ಮಂದಿಗೆ 40 ರೂಪಾಯಿ, 325 ಕಾನ್ಸ್‌ಟೇಬಲ್‌ಗಳಿಗೆ 50ರೂಪಾಯಿ. 109 ಮಂದಿಗೆ 75 ರೂಪಾಯಿ, 211 ಮಂದಿಗೆ 100ರೂಪಾಯಿ ನೀಡಲಾಗಿದೆ. ಇದು ಛತ್ತೀಸ್‌ಗಡದ ಸಾಹಸ ಮೆರೆದ ಪೊಲೀಸರಿಗೆ ಸಿಕ್ಕಬಹುಮಾನದ ಮೊತ್ತ.
1362 ಪೊಲೀಸರಲ್ಲಿ ಸಹಾಯಕ ಉಪನಿರೀಕ್ಷಕ ಸಂಗ್ರಾಮ ಸಿಂಗ್‌ರಿಗೆ ನಾಲ್ಕುಸಾವಿರ ನಗದು ನೀಡಲಾಗಿದೆ.ಬಸ್ತರ್‌ನ ಕಳೆದ ಎರಡುವರ್ಷಗಳಲ್ಲೇ ಬಹುಮಾನ ನೀಡಲಾದ ಅತ್ಯಧಿಕ ಮೊತ್ತ ಇದು.
109 ಮಂದಿಗೆ ಭಡ್ತಿ ನೀಡಲಾಗಿದೆ. ನಾಲ್ವರಿಗೆ ಶೌರ್ಯಪದಕ ನೀಡಲಾಗಿದೆ. ಇದೇರೀತಿ ನಾಲ್ವರಿಗೆ 2500 ರೂಪಾಯಿ, ಇಬ್ಬರಿಗೆ 1500ರೂಪಾಯಿ, ಮತ್ತು 37 ಮಂದಿಗೆ ಸಾವಿರ ರೂಪಾಯಿ ಬಹುಮಾನ ನೀಡಲಾಗಿದೆ. 500, 350, 250,300,375 ರೂಪಾಯಿ ನಗದು ಬಹುಮಾನವನ್ನು ಪಡೆದವರೂ ಇದ್ದಾರೆ.