ಮಮತಾ ತಲೆಕಡಿದವರಿಗೆ 11 ಲಕ್ಷ ರೂ.: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

Update: 2017-04-12 05:07 GMT

ಆಗ್ರಾ, ಎ.12: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಬಿಜೆಪಿ ಯೂತ್ ವಿಂಗ್ ನಾಯಕನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹನುಮಾನ್ ಜಯಂತಿ ರ್ಯಾಲಿಯ ಸಂದರ್ಭ ನಡೆದ ಲಾಠಿಚಾರ್ಜ್ ಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ವಿರುದ್ಧ ಯೋಗೇಶ್ ವರ್ಷ್ನೇ ಈ ಹೇಳಿಕೆ ನೀಡಿದ್ದು, ಮಮತಾ ಸರಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಮುಸ್ಲಿಮರನ್ನು ಓಲೈಸುತ್ತಿದೆ. ಈ ಕಾರಣದಿಂದಾಗಿ ಮುಖ್ಯಮಂತ್ರಿಯ ತಲೆ ಕಡಿದವರಿಗೆ 11 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದವರು ಹೇಳಿದ್ದಾರೆ.

ಲಾಠಿಚಾರ್ಜ್ ಗೊಳಗಾದವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಬದಲಾಗಿ ಭಕ್ತರಾಗಿದ್ದರು. ಲಾಠಿಚಾರ್ಜ್ ನಿಂದ ಹಲವಾರು ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದವರು ಆರೋಪಿಸಿದ್ದಾರೆ. ಮಂಗಳವಾರ ಯಾವುದೇ ರ್ಯಾಲಿ ನಡೆಸಬಾರದು ಎಂದು ಪೊಲೀಸರು ಹನುಮಾನ್ ಜಯಂತಿ ಆಯೋಜಕರಿಗೆ ಸೂಚನೆ ನೀಡಿದ್ದರು. ಆದರೆ ಇದಕ್ಕೆ ಕಿವಿಗೊಡದ ಆಯೋಜಕರು ರ್ಯಾಲಿ ನಡೆಸಿದ್ದರು ಎನ್ನಲಾಗದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News