ಹೇಮಾ ಮಾಲಿನಿ ಬಗ್ಗೆ ಮಹಾರಾಷ್ಟ್ರ ಶಾಸಕನಿಂದ ಆಕ್ಷೇಪಾರ್ಹ ಹೇಳಿಕೆ !

Update: 2017-04-13 16:16 GMT

ಮುಂಬೈ, ಎ . 13 :  ವಿವಾದಾಸ್ಪದ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಮಹಾರಾಷ್ಟ್ರದ ಪಕ್ಷೇತರ ಶಾಸಕ ಬಚ್ಚು ಕಾಡು ಈ ಬಾರಿ ಎಲ್ಲೇ ಮೀರಿಯೇ ಮಾತನಾಡಿ ಸಮಸ್ಯೆಗೆ ಸಿಲುಕಿದ್ದಾರೆ. ಈ ಬಾರಿ ಅವರು ಸಂಸದೆ ಹೇಮಾ ಮಾಲಿನಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿದ್ದಾರೆ.
 
" ಹೇಮಾ ಮಾಲಿನಿ ಪ್ರತಿದಿನ ಕುಡಿಯುತ್ತಾರೆ. ಆದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ? " ಎಂದು ಹೇಳಿದ್ದಾರೆ ಬಚ್ಚು ! 

ನಾಂದೇಡ್ ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಬಚ್ಚು ರೈತರು ಮದ್ಯಪಾನದಿಂದಾಗಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ ಎಂಬ ಬಗ್ಗೆ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. 

" 75%  ಸಂಸದರು, ಶಾಸಕರು , ಪತ್ರಕರ್ತರು (ಮದ್ಯ ) ಕುಡಿಯುತ್ತಾರೆ . ಹೇಮಾ ಮಾಲಿನಿ ಸಹ ಬಹಳ ಕುಡಿಯುತ್ತಾರೆ. ಆದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ? " ಎಂದು ಬಚ್ಚು ಕೇಳಿದ್ದಾರೆ. 

ಬಚ್ಚು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನೂ ಬಿಡಲಿಲ್ಲ. " ಗಡ್ಕರಿಯ ಮಗನ ಮದುವೆಯ ಖರ್ಚು 4 ಕೋಟಿ . ಹಾಗಾದರೆ ಅವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ? " ಎಂದು ಬಚ್ಚು ಹೇಳಿದ್ದಾರೆ. 

ಕಳೆದ ವರ್ಷ ಬಚ್ಚು ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿ ಬಂಧನಕ್ಕೊಳಗಾಗಿದ್ದರು.

ವರದಿಗಳ ಪ್ರಕಾರ 2017 ರ ಮೊದಲ ಮೂರು ತಿಂಗಳಲ್ಲೇ ಮಹಾರಾಷ್ಟ್ರದ ಮರಾಠವಾಡ ಪ್ರದೇಶವೊಂದರಲ್ಲೇ  200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News