ಕತರ್: ರಮಝಾನ್‌ನಲ್ಲಿ ಆಹಾರ ವಸ್ತುಗಳ ಕಠಿಣ ತಪಾಸಣೆ!
Update: 2017-05-13 08:53 GMT
ದೋಹ, ಮೇ 13: ರಮಝಾನ್‌ನಲ್ಲಿ ಮಾರುಕಟ್ಟೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯಲಿದೆ ಎಂದು ದೋಹ ಪುರಸಭೆಯ ತಪಾಸಣಾ ವಿಭಾಗದ ಮುಖ್ಯಸ್ಥ ಹಮದ್ ಅಶ್ಯುಹಾನಿ ತಿಳಿಸಿದ್ದಾರೆ. ಮೂರು ಪಾಳಿಗಳಲ್ಲಿ 45 ಅಧಿಕಾರಿಗಳನ್ನು ತಪಾಸಣಾ ಕಾರ್ಯಕ್ಕಾಗಿ ನೇಮಕಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಮಾರಾಟಕ್ಕೆ ಬರುವ ಆಹಾರವಸ್ತುಗಳ ಗುಣಮಟ್ಟ, ಕಲಬೆರಕೆ ಇತ್ಯಾದಿ ವಿಷಯಗಳನ್ನು ತಪಾಸಣಾತಂಡ ಪರೀಕ್ಷಿಸಿ ನೋಡಲಿದೆ. ಇದೇ ವೇಳೆ 14 ವೆಟರ್ನರಿ ವೈದ್ಯರುಗಳನ್ನು ಕಸಾಯಿಖಾನೆಗಳ ತಪಾಸಣೆಗೆ ನೇಮಿಸಲಾಗಿದೆ. ಇವರು ಅಲ್ಲಿ ಪ್ರತಿದಿನ ವಧಿಸುವ ಪ್ರಾಣಿಗಳನ್ನು ಪರೀಕ್ಷಿಸಲಿದ್ದಾರೆ. ಆನಂತರವೇ ಮಾಂಸವನ್ನು ಮಾರಲು ಅನುಮತಿ ನೀಡಲಾಗುತ್ತದೆ. ಸೆಂಟ್ರಲ್ ಮಾರ್ಕೆಟ್‌ನ ಮಾರಾಟ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹಮದ್ ಅಶ್ಯಹಾನಿ ಹೇಳಿದರು.