ಮಲತಂದೆಯಿಂದ ಅತ್ಯಾಚಾರ: ಗರ್ಭಿಣಿಯಾದ 10ರ ಹರೆಯದ ಬಾಲಕಿಯ ಸ್ಥಿತಿ ಚಿಂತಾಜನಕ

Update: 2017-05-14 12:34 GMT

ರೋಹ್ಟಕ್,ಮೇ 14: ಹರ್ಯಾಣದ ರೋಹ್ಟಕ್ ಮತ್ತೊಂದು ಆಘಾತಕಾರಿ ಪ್ರಕರಣಕ್ಕೆ ಸಾಕ್ಷಿಯಾಗಿದೆ. ತನ್ನ ಮಲತಂದೆಯಿಂದ ಪದೇಪದೇ ಅತ್ಯಾಚಾರಕ್ಕೊಳಗಾದ 10ರ ಹರೆಯದ ಬಾಲಕಿಯೋರ್ವಳು ಐದು ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕೆಯ ದೇಹಸ್ಥಿತಿ ಚಿಂತಾಜನಕವಾಗಿದೆಯೆಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಹೊಟ್ಟೆಪಾಡಿಗಾಗಿ ಬಿಹಾರದಿಂದ ಇಲ್ಲಿಗೆ ಬಂದು ಕೂಲಿ ಕೆಲಸವನ್ನು ಮಾಡುತ್ತಿರುವ ಬಾಲಕಿಯ ತಾಯಿ ಆಕೆಯನ್ನು ವೈದ್ಯರ ಬಳಿ ಕರೆದೊಯ್ದಿಗ ಗರ್ಭಿಣಿಯಾಗಿರುವುದು ದೃಢಪಟ್ಟಿದೆ.

ತಂದೆಯ ತಮ್ಮನೂ ಆಗಿರುವ ಮಲತಂದೆ ತನ್ನ ಮೇಲೆ ಪದೇಪದೇ ಅತ್ಯಾಚಾರ ವೆಸಗಿದ್ದ ಮತ್ತು ಈ ಬಗ್ಗೆ ಯಾರಿಗೂ ತಿಳಿಸದಂತೆ ತನಗೆ ಬೆದರಿಕೆಯೊಡ್ಡಿದ್ದ ಎಂದು ಬಾಲಕಿ ತಿಳಿಸಿದ್ದಾಳೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೇ 11ರಂದು ಇಲ್ಲಿಯ ಇಂಡಸ್ಟ್ರಿಯಲ್ ಮಾಡೆಲ್ ಟೌನ್‌ಶಿಪ್‌ನ ಖಾಲಿಜಾಗದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. 23ರ ಹರೆಯದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News