ದಸರಾ ಹಿನ್ನೆಲೆ: ಕೆಎಸ್ಸಾರ್ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ

Update: 2017-09-17 06:33 GMT

ಮೈಸೂರು,ಸೆ.14: ವಿಶ್ವವಿಖ್ಯಾತ ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕೆಎಸ್ಸಾರ್ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ದಸರಾ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಗ್ರಾಮಾಂತರ ಘಟಕದಿಂದ 8 ಮಲ್ಟಿ ಆಕ್ಸೆಲ್ ಬಸ್ ಗಳಿಗೆ ಮೈಸೂರು ಗ್ರಾಮಾಂತರ ಘಟಕ ವಿಭಾಗೀಯ ನಿಯಂತ್ರಣ ಅಧಿಕಾರಿ ವಾಸು  ಚಾಲನೆ ನೀಡಿದರು.

ದಸರಾ ಹಿನ್ನೆಲೆ ಹೈದರಾಬಾದ್, ಪಣಜಿ, ಪೂನಾ, ತಿರುಪತಿ, ಕೊಯಂಬತ್ತೂರ್,ತಿರುಚೂರು ಸೇರಿದಂತೆ ಹಲವು ಕಡೆ ಪ್ರಯಾಣಿಸಲಿದೆ. ರಾತ್ರಿ  8ಗಂಟೆಗೆ, ಚೆನ್ನೈ, 8:05ಕ್ಕೆ ಸಿಕಂದ್ರಾಬಾದ್,  ಮೈಸೂರು, ಬೆಂಗಳೂರು, ಬೆಳಿಗ್ಗೆ 5.30ಕ್ಕೆ ವಿರಾಜಪೇಟೆಗೆ ಬಸ್ ಸಂಚರಿಸಲಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News