ದಸರಾ ಹಿನ್ನಲೆ: ಸೆ.15 ರಿಂದ ಕ್ರಾಕ್ಸ್ ಮೈಸೂರು ಫ್ಯಾಷನ್ ವೀಕ್ ಸೀಸನ್ ಆರಂಭ

Update: 2017-09-17 06:33 GMT

ಮೈಸೂರು, ಸೆ.14: ಕ್ರಾಕ್ಸ್ ಮೈಸೂರು ಫ್ಯಾಷನ್ ವೀಕ್ ಸೀಸನ್ 4 ಅನ್ನು ನಗರದ ರ್ಯಾಡಿಸನ್ ಬ್ಲು ಪ್ಲಾಜಾ ಹೊಟೇಲ್ ನಲ್ಲಿ ಸೆ.15 ರಿಂದ 17ರವರೆಗೆ ಆಯೋಜಿಸಲಾಗಿದೆ ಎಂದು ವಿನ್ಯಾಸಗಾರ್ತಿ ಜಯಂತಿ ಬಲ್ಲಾಳ್ ತಿಳಿಸಿದ್ದಾರೆ.

ಮೂರು ದಿನಗಳ ಕಾಲ ಪ್ರತೀ ದಿನ ಸಂಜೆ 6.10ಕ್ಕೆ ಆರಂಭವಾಗುವ ಫ್ಯಾಷನ್ ಶೋಷನಲ್ಲಿ,  ವಿಜಯಲಕ್ಷ್ಮಿ ಸಿಲ್ಕ್ಸ್, ರಾಜಾ ಪಂಡಿತ್ ತ್ರಿನೇತ್ರ, ಡ್ರೀಮ್ ಜೋನ್ ವಿದ್ಯಾರ್ಥಿಗಳು, ರಮೇಶ್ ದೆಂಬ್ಲಾರವರಿಂದ  ಕೃಷ್ಣ ದೆಂಬ್ಲಾ, ರೆಶ್ಮಾ ಕುನ್ಹಿ, ರೆಬೆಕಾ ದಿವಾನ್, ರೋಷನ್ ಮತ್ತು ದಿನೇಂದ್ರ ಪಾಶ್ ಅಫೇರ್, ಝಹೀನಾ, ಹೈದ್ರಾಬಾದ್ ನ ಕಚನ್ ಸಭರ್ವಾಲ್ ಜುಬೆ, ಶ್ರವಣ್ ಕುಮಾರ್, ಕ್ರೋಕ್ಸ್ ಎಕ್ಸ್ ಕ್ಲೂಸಿವ್ ಕಲೆಕ್ಷನ್, ಅಸಿಫ್ ಮರ್ಚೆಂಟ್ ಮುಂತಾದವರ 40 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಹೇಳಿದರು.

ನಾಡ ಹಬ್ಬ ಮೈಸೂರು ದಸರಾವನ್ನು ದೃಷ್ಟಿಯಲ್ಲಿರಿಸಿಕೊಂಡು  ವಸ್ತ್ರ ವಿನ್ಯಾಸಗೊಳಿಸಲಾಗಿದ್ದು ಆನೆ, ಅಂಭಾರಿ ಸೇರಿದಂತೆ ಹಬ್ಬದ ಪ್ರತಿಬಿಂಬವನ್ನು ಉಡುಗೆಗಳಲ್ಲಿ ಮೂಡಿಸಲಾಗಿದೆ. ನಟಿಯರಾದ ಶೃತಿ ಹರಿಹರನ್, ರಶ್ಮಿಕಾ ಮಂದಣ್ಣ ಮೊದಲಾದ ಖ್ಯಾತ ನಾಮರು ಸೇರಿದಂತೆ ಲ್ಯಾಕ್ಮೆ ಫ್ಯಾಷನ್ ವೀಕ್ನ 14 ಜನಪ್ರಿಯ ಮಾಡೆಲ್ ಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕುವರು ಎಂದ ಅವರು, ಮೂರು ದಿನಗಳ ಕಾಲವು ಅದ್ಭುತ ವಿನ್ಯಾಸಗಳು, ಗ್ಲಾಮರ್ ಲೋಕದ ಅನಾವರಣವಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸೈನರ್ ಝಹೀನಾ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News