ದಸರಾ ಹಿನ್ನಲೆ ರಾಜಮನೆತನಕ್ಕೆ ಅಧಿಕೃತ ಆಹ್ವಾನ ನೀಡಿದ ಜಿಲ್ಲಾಡಳಿತ

Update: 2017-09-18 16:01 GMT

ಮೈಸೂರು,ಸೆ.18: ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಜಿಲ್ಲಾಡಳಿತ ರಾಜ ಕುಟುಂಬಕ್ಕೆ ಅಧಿಕೃತ ಆಹ್ವಾನ ನೀಡಿದೆ.

ಮೈಸೂರು ರಾಜಮನೆತನಕ್ಕೆ ದಸರಾ ಉಪ ಸಮಿತಿ ಅಧಿಕೃತ ಆಹ್ವಾನ ನೀಡಿದ್ದು, ಮೈಸೂರು ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು.

ಮೈಸೂರು ಅರಮನೆಯಲ್ಲಿರುವ ರಾಜಮನೆತನದ ನಿವಾಸಕ್ಕೆ ಆಗಮಿಸಿದ ಉಸ್ತುವಾರಿ ಸಚಿವರು, ಹಾಗೂ ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭ ಮೇಯರ್ ಎಂ.ಜೆ.ರವಿಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.  ಸಚಿವ ಮಹದೇವಪ್ಪನವರು ಮಾತನಾಡಿ  ರಾಜಮನೆತನಕ್ಕೆ 36 ಲಕ್ಷ ರೂಪಾಯಿ ಗೌರವ ಧನವನ್ನು ನೀಡಿದ್ದೇವೆ. ಕಳೆದ ವರ್ಷ 35 ಲಕ್ಷ ನೀಡಿದ್ದೆವು. ಈ ವರ್ಷ 1ಲಕ್ಷ ಹೆಚ್ಚು ನೀಡಿದ್ದೇವೆ.

ದಸರಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ. ದಸರಾಗೆ ಸಕಲ ಸಿದ್ಧತೆ ನಡೆದಿದೆ ಎಂದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಖಾಸಗಿ ದರ್ಬಾರ್ ನಲ್ಲಿ ಯಾವುದೇ ಬದಲಾವಣೆ ಇಲ್ಲ. ಖಾಸಗಿ ದರ್ಬಾರ್ ನಲ್ಲಿ ಯದುವೀರ ಅವರೊಂದಿಗೆ ತ್ರಿಷಿಕಾ ಕುಮಾರಿ ಅವರೂ ಭಾಗವಹಿಸುತ್ತಾರೆ. ಪ್ರತಿವರ್ಷದಂತೆ ಖಾಸಗಿ ದರ್ಬಾರ್ ನಡೆಯಲಿದೆ. ಯಾವುದೇ ಬದಲಾವಣೆ ಇರೋದಿಲ್ಲ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಜಂಬೂ ಸವಾರಿಯ ಪುಷ್ಪಾರ್ಚನೆಯಲ್ಲೂ ಭಾಗಹಿಸುವರು. ಜಿಲ್ಲಾಡಳಿತದ ಅಧಿಕೃತ ದಸರಾ ಆಮಂತ್ರಣ ಸ್ವೀಕರಿಸಿ ರಾಜವಂಶಸ್ಥೆ ಪ್ರಮೋದಾದೇವಿ. ಪುತ್ಥಳಿ ನಿರ್ಮಾಣ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಆ ಬಗ್ಗೆ ಈಗಲೇ ಉತ್ತರಿಸುವುದಿಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News