ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾನಸ ರಾಜೀನಾಮೆ

Update: 2017-09-20 06:41 GMT

ಮೈಸೂರು,ಸೆ.19: ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾನಸ ರಾಜೀನಾಮೆ ನೀಡಿದ್ದಾರೆ. ಉಪಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾದ ಮೂರೇ ದಿನಗಳಲ್ಲಿ ಮಾನಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಉಪಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದಾಗ ಸಂತೋಷವಾಗಿತ್ತು. ಈ ಬಾರಿಯ ಕವಿಗೋಷ್ಠಿಯನ್ನು ವಿಭಿನ್ನವಾಗಿ ರೂಪಿಸಬೇಕು ಎಂಬ ಕನಸು ಕಂಡಿದ್ದ ನನಗೆ ಅಧಿಕಾರಿಗಳ ಮಾತು ಕೇಳಿ ದಸರಾ ಕವಿಗೋಷ್ಠಿಯಲ್ಲಿ ನನಗೇನು ಕೆಲಸ ಎಂಬಾತಾಯಿತು. ಈ ಸಮಿತಿಯಲ್ಲಿ ನಿಮಗೆ ಯಾವುದೇ ರೀತಿಯ ಕೆಲಸವಿಲ್ಲ. ದಿನಾಂಕ, ಸ್ಥಳ ನಿಗದಿ, ಅತಿಥಿಗಳ ಆಮಂತ್ರಣ, ಕವಿಗಳ ಆಯ್ಕೆಯವರೆಗೆ ಎಲ್ಲವನ್ನೂ ನಾವೀಗ ಮಾಡಿ ಮುಗಿಸಿದ್ದೇವೆ. ನೀವು ವೇದಿಕೆಯಲ್ಲಿ ಕುಳಿತುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಗೋಷ್ಠಿಗಳ ಸಿದ್ಧತೆ ಹಾಗೂ ನಿರ್ವಹಣೆಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಮಾನಸ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ದಸರಾ ಮಹೋತ್ಸವ ಉದ್ಘಾಟನೆಗೆ ಕೇವಲ 5 ದಿನ ಬಾಕಿ ಇರುವಾಗ ಕವಿಗೋಷ್ಠಿ ಉಪಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿರುವ ಸರ್ಕಾರದ ನಡೆ ಪ್ರಶ್ನಿಸಿ ಮಾನಸ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News