ಗಣರಾಜ್ಯೋತ್ಸವ ಪೆರೇಡ್ ಮಾದರಿಯಲ್ಲಿ ದಸರಾ: ಸ್ಥಳ ಪರಿಶೀಲನೆ ನಡೆಸಿದ ವಾಯುದಳದ ಅಧಿಕಾರಿಗಳು
Update: 2017-09-20 06:41 GMT
ಮೈಸೂರು, ಸೆ.19: ದಸರಾ ಮಹೋತ್ಸವ ಸಮಿತಿ 2017ನೆ ನಾಡಹಬ್ಬವನ್ನು ವೈಭವದಿಂದ ಹಾಗೂ ಗಣರಾಜ್ಯೋತ್ಸವ ದಿನದ ಪೆರೇಡ್ ಮಾದರಿಯಲ್ಲಿ ಮೆರವಣಿಗೆ ಆಯೋಜಿಸುತ್ತಿದ್ದು, ರಕ್ಷಣಾ ದಳಗಳನ್ನು ಮೆರವಣಿಗೆಯಲ್ಲಿ ಕರೆತರುವ ಪ್ರಯತ್ನ ಮುಂದುವರಿದಿದೆ.
ಮಂಗಳವಾರ ಮೈಸೂರಿನಲ್ಲಿರುವ ವಾಯುದಳದ ಅಧಿಕಾರಿಗಳು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್ ಅವರ ನೇತೃತ್ವದಲ್ಲಿ ಅರಮನೆ ಆವರಣದಲ್ಲಿ ಪರಿಶೀಲನೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡರು.
ವಾಯುದಳದ ಬ್ಯಾಂಡ್ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳವ ವಿಚಾರವನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ತಿಳಿಸುವುದಾಗಿ ಜಿಲ್ಲಾಧಿಕಾರಿ ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅರಮನೆ ಆಡಳಿತ ಮಂಡಳಿ ಉಪನಿರ್ದೆಶಕ ಟಿ. ಎಸ್. ಸುಬ್ರಹ್ಮಣ್ಯ , ಎಸಿಪಿ ಶೈಲೇಂದ್ರ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.