ಹೆಲಿರೇಡ್ ನಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೈಸೂರು ವೀಕ್ಷಣೆ
Update: 2017-09-25 12:23 GMT
ಮೈಸೂರು, ಸೆ.25: ಸಾಂಸ್ಕೃತಿಕ ನಗರಿ ಮೈಸೂರನ್ನು ಆಕಾಶದಲ್ಲಿ ಹಾರಾಡುತ್ತ ವೀಕ್ಷಿಸಿದರೆ ಹೇಗಿರತ್ತೆ ಎಂದು ನೋಡಲು ಪ್ರವಾಸಿಗರಿಗೆ ಹೆಲಿರೇಡ್ ಅವಕಾಶ ಕಲ್ಪಿಸಲಾಗಿದ್ದು, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೆಲಿರೇಡ್ ನಲ್ಲಿ ಭಾಗವಹಿಸಿ ಮೈಸೂರು ಸೌಂದರ್ಯವನ್ನು ವೀಕ್ಷಿಸಿದರು.
ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಮೈಸೂರಿನಲ್ಲಿ ಪ್ರವಾಸಿಗರಿಗೋಸ್ಕರ ಮೈಸೂರಿನ ಸೌಂದರ್ಯವನ್ನು ಸವಿಯಲು ವಿವಿಧ ಅವಕಾಶಗಳನ್ನು ಕಲ್ಪಿಸಲಾಗಿದೆ. ಅದೇ ರೀತಿ ಲಲಿತ್ ಮಹಲ್ ಹೆಲಿಪ್ಯಾಡ್ ನಿಂದ ಹೆಲಿರೇಡ್ ಸೌಕರ್ಯ ಕಲ್ಪಿಸಲಾಗಿದ್ದು, ಮೈಸೂರಿನ ಪ್ರಕೃತಿ ಸೌಂದರ್ಯವನ್ನು ಬಾನೆತ್ತರಕ್ಕೆ ಹಾರುತ್ತ ಸವಿಯಬಹುದಾಗಿದೆ. ಸೋಮವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೆಲಿರೇಡ್ ನಲ್ಲಿ ಪಾಲ್ಗೊಂಡಿದ್ದು, ನಗರ ಸೌಂಧರ್ಯವನ್ನು ಕಣ್ತುಂಬಿಸಿಕೊಂಡರು.