ಸೆ.29 ರಂದು “ಏರ್ ಶೋ” ಪ್ರದರ್ಶನ: ಜಿಲ್ಲಾಧಿಕಾರಿ ಡಿ.ರಂದೀಪ್
ಮೈಸೂರು,ಸೆ.27: ದಸರಾ ಮಹೋತ್ಸವ 2017ರ ಅಂಗವಾಗಿ ಈ ಬಾರಿ ಭಾರತೀಯ ವಾಯು ದಳದ ವತಿಯಿಂದ ಮೈಸೂರಿನಲ್ಲಿ ಸೆಪ್ಟೆಂಬರ್ 29 ರಿಂದ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದ್ದಾರೆ.
ಪೆಟಲ್ ಡ್ರಾಪ್, ಸ್ಲಿದರಿಂಗ್ ಆಪರೇಷನ್ಸ್, ಸ್ಕೈ ಡೈವಿಂಗ್ ಮುಂತಾದ ಕಸರತ್ತುಗಳು ಈ ಪ್ರದರ್ಶನದಲ್ಲಿ ಇರಲಿವೆ. ಆಕಾಶಗಂಗಾ ತಂಡ ಪ್ರದರ್ಶನದಲ್ಲಿ ಭಾಗವಹಿಸುತ್ತಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬನ್ನಿ ಮಂಟಪ ಪ್ರದೇಶದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯಾದರೂ ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನ ನಡೆಯುವುದೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಪ್ರತಾಪ ಸಿಂಹ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ವಿಶೇಷ ಆಸಕ್ತಿಯಿಂದಾಗಿ “ಏರ್ ಶೋ” ನಡೆಯುವುದು ಸಾಧ್ಯವಾಗಿದೆ.
ಭದ್ರತೆ, ಸ್ಥಳಾಭಾವ ಹಾಗೂ ಇನ್ನಿತರ ಕಾರಣಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ದಸರಾ ಸಂಧರ್ಭದಲ್ಲಿ ವೈಮಾನಿ ಪ್ರದರ್ಶನವನ್ನು ಕೈಬಿಡಲಾಗಿತ್ತು. ಆದರೆ ಈ ಬಾರಿ ವೈಮಾನಿಕ ಪ್ರದರ್ಶನ ನಡೆಯುವುದರಿಂದ ಜನರ ಉತ್ಸಾಹ ಮೇರೆ ಮೀರುವಂತೆ ಮಾಡಲಿದೆ.