ದಸರಾ ಮಹೋತ್ಸವ: ಹಿರಿಯ ನಾಗರಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ
ಮೈಸೂರು, ಸೆ.28: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ಸಾಲಿನ ಮಹಿಳಾ ದಸರಾ ಅಂಗವಾಗಿ ಗುರುವಾರ ಹಿರಿಯ ನಾಗರಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ದಸರಾ ಮಹೋತ್ಸವದ ಅಂಗವಾಗಿ ಹಿರಿಯ ನಾಗರಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ಖುಷಿಯ ಸಂಗತಿ. ನೀವು ಚೆನ್ನಾಗಿರಬೇಕು. ಏಕೆಂದರೆ ನಾವೂ ಕೂಡ ನಿಮ್ಮ ಹಂತವನ್ನು ಒಂದಲ್ಲಾ ಒಂದು ದಿನ ತಲುಪುತ್ತೇವೆ. ನಿಮಗೆ ನಮ್ಮ ಅನುಭವ ಇರುತ್ತದೆ. ಆದರೆ ನಮಗಿರೋದಿಲ್ಲ. ಈ ಅದ್ಭುತ ವೇದಿಕೆಯನ್ನು ಹಿರಿಯ ನಾಗರಿಕರು ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ವೇಳೆ ಹಿರಿಯ ನಾಗರಿಕರು ವೇದಿಕೆ ಮೇಲೆ ತಮ್ಮ ಸಂತಸವನ್ನು ಹಂಚಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಲತಾರಾಜ ಶೇಖರ್, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ನಾಮ ನಿರ್ದೇಶಿತ ನಿರ್ದೇಶಕ ಅಪ್ಪು ಗೌಡ, ಉಪಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.