ಆಯುಧ ಪೂಜಾ, ವಿಜಯದಶಮಿ ಆಚರಣೆ: ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ

Update: 2017-09-28 17:10 GMT

ಮೈಸೂರು, ಸೆ.28: ನವರಾತ್ರಿಯ ಪ್ರಮುಖ ದಿನಗಳಲ್ಲಿ ಒಂದಾದ ಆಯುಧಪೂಜಾ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮೈಸೂರು ನಗರದ ಜನತೆ ಆಯುಧ ಪೂಜೆ ಹಾಗೂ ವಿಜಯದಶಮಿಗೆ ಫಲ ಪುಷ್ಪಗಳ ಖರೀದಿಯಲ್ಲಿ ತೊಡಗಿದ್ದಾರೆ.

ನಗರದಾದ್ಯಂತ ಸಂಭ್ರಮ ಮನೆಮಾಡಿದ್ದು, ಎಲ್ಲರೂ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಹಾನವಮಿಯಂದು ಆಯುಧ ಪೂಜೆಯನ್ನು ನಡೆಸಲಾಗುತ್ತಿದ್ದು, ಈ ದಿನ ನಾವು ಉಪಯೋಗಿಸುವ ಪ್ರಮುಖ ವಸ್ತುಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ.

ಪಾಂಡವರು ಅಜ್ಞಾತವಾಸ ಮುಗಿಸಿದ ಪವಿತ್ರ ದಿನವೆಂದು ಐತಿಹ್ಯಗಳು ಹೇಳುತ್ತವೆ. ಪಾಂಡವರು ಅಜ್ಞಾತವಾಸ ಹೋಗುವಾಗ ಕಾಡಿನಲ್ಲಿರುವ ಬನ್ನಿಗಿಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಕಟ್ಟಿ, ಅಜ್ಞಾತವಾಸ ಮುಗಿಸಿದಾಗ ಬನ್ನಿ ಗಿಡವನ್ನು ಪೂಜಿಸಿ, ಶಸ್ತ್ರಾಸ್ತ್ರಗಳನ್ನು ಬಿಡಿಸಿಕೊಂಡ ಪವಿತ್ರ ದಿನವೆಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News