ಎಟಿಎಂ ಪಾಸ್ ವರ್ಡ್ ಕೂಡ ಹಂಚಿಕೊಳ್ಳುವ ಗೆಳೆತನ ನಮ್ಮದು: ಇರ್ಶಾದ್

Update: 2018-08-04 14:04 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ಇಕ್ಬಾಲ್ ಮತ್ತು ಆರೀಫ್ ನನ್ನ ಬೆಸ್ಟ್ ಫ್ರೆಂಡ್ಸ್

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?

ಪಾಣೆಮಂಗಳೂರಿನ ದಾರುಲ್ ಇಸ್ಲಾಂ ಶಾಲೆಯಲ್ಲಿರುವಾಗ ನಮ್ಮ ಮೊದಲ ಭೇಟಿಯಾಯಿತು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಶಾಲೆಯಲ್ಲಿರುವಾಗ ಅವರು ನನ್ನೊಂದಿಗೆ  ಬೆರೆಯುತ್ತಿದ್ದ ರೀತಿಯಿಂದ ಬೆಸ್ಟ್ ಫ್ರೆಂಡ್ ಆದರು.

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ? 

ನನಗೆ ಯಾವುದೇ ರೀತಿಯ ಸಮಸ್ಯೆಗಳಾದರೂ ಮುಂದೆ ನಿಂತು ಧೈರ್ಯ ತುಂಬುವ ಜೊತೆಗೆ ಸಹಾಯ ಮಾಡುತ್ತಾರೆ.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?

ಪ್ರವಾಸ ಹೋಗುವುದಾಗಿ ಹೇಳಿ ಸಿದ್ಧತೆ ನಡೆಸಿದ ಬಳಿಕ ಕೈಕೊಟ್ಟಾಗ ಸಿಟ್ಟು ಬರುತ್ತದೆ.   

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ? 

ನಮ್ಮೆಲ್ಲರಿಗೂ ಫಾಸ್ಟ್ ಫುಡ್ ಅಚ್ಚುಮೆಚ್ಚಿನ ತಿನಿಸು.

► ನಿಮ್ಮ ನಡುವಿನ ವಿರೋಧಾಭಾಸಗಳು ?

ವಿರೋಧಾಭಾಸಗಳೇನೂ ಇಲ್ಲ.

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ತಮಾಷೆಗಾಗಿ ನಡೆಯುತ್ತೆ ಅಷ್ಟೆ.

► ಮೊದಲು ರಾಜಿ ಆದದ್ಯಾರು ? 

ಯಾರು ಕೋಪ ಮಾಡಿಕೊಳ್ಳುತ್ತಾರೋ ಅವರೇ ಮೊದಲು ರಾಜಿಯಾಗಬೇಕು. ಇದು ನಮ್ಮ ಪಾಲಿಸಿ

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ? 

ಮೂವರಲ್ಲಿ ಯಾವುದೇ ಕಷ್ಟ–ಸುಖಗಳಿದ್ದರೂ ಹಂಚಿಕೊಂಡು ಜೀವನದ ಕೊನೆಯವರೆಗೂ ಒಗ್ಗಟ್ಟಿನಲ್ಲಿರಬೇಕು. 

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ? 

ದಾರಿ ತಪ್ಪುವಾಗ ಸರಿಪಡಿಸಿ, ಕೆಟ್ಟ ಚಟಗಳಿಗೆ ಹೋಗುವಾಗ ಬುದ್ಧಿವಾದ ಹೇಳುವ ಯೋಗ್ಯತೆ ಇರಬೇಕು. ಎಲ್ಲಾ ಸಮಯದಲ್ಲೂ  ಕೈಜೋಡಿಸುವ  ಗುಣ ಹೊಂದಿರಬೇಕು.

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ? 

ಇಲ್ಲ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?

ನನಗೆ ಸಾವಿರಾರು ಫ್ರೆಂಡ್ ಇದ್ದಾರೆ. ಆದರೆ ಅವರಲ್ಲಿ ಇವರಿಬ್ಬರಷ್ಟೇ ನನ್ನ ಬೆಸ್ಟ್ ಫ್ರೆಂಡ್ಸ್ .

ನಮ್ಮ ಸ್ನೇಹಕ್ಕೆ ತುಂಬಾ ವಿಶೇಷತೆಗಳಿವೆ.  ನಾವು ಮೂರು ಮಂದಿಯೂ ಹತ್ತಿರದ ಊರಿನವರು. ಯಾವುದೇ ಕಾರ್ಯಕ್ರಮವಿದ್ದರೂ ಒಟ್ಟಿಗೇ ಹೋಗುತ್ತೇವೆ. ನಮ್ಮಲ್ಲಿ ಒಬ್ಬ ಬರಲು ಸಾಧ್ಯವಾಗದಿದ್ದರೂ ಆ ಕಾರ್ಯಕ್ರಮಕ್ಕೆ ನಾವು ಹೋಗುವುದಿಲ್ಲ. ನಮ್ಮ ನಡುವೆ ಯಾವುದೇ ಮುಚ್ಚುಮರೆ ಇಲ್ಲ, ಎಲ್ಲಾ ವಿಚಾರಗಳನ್ನೂ ಹಂಚಿಕೊಳ್ಳುತ್ತೇವೆ. ನಮ್ಮೆಲ್ಲರ ಬ್ಯಾಂಕ್ ಖಾತೆಯ ವಿವರಗಳು, ಎಟಿಎಂ ನ ಪಾಸ್ ವರ್ಡ್ ಗಳೂ ಎಲ್ಲರ ಬಳಿ ಇದೆ. ಇದು ನಮ್ಮೊಳಗಿನ ಸ್ನೇಹ, ನಂಬಿಕೆಯ ಪ್ರತೀಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ