ಹುಡುಗಿಗೆ ಪ್ರಪೋಸ್ ಮಾಡಿದ ವಿಚಾರದಲ್ಲಿ ಬೆಸೆದ ಸ್ನೇಹ ನಮ್ಮದು: ಪವನ್ ಪಿವಿ
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನನ್ನ ಬೆಸ್ಟ್ ಫ್ರೆಂಡ್ ಆದಿತ್ಯ .
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ದ್ವಿತೀಯ ಪಿಯುಸಿಯಲ್ಲಿ ಮೊದಲ ಬಾರಿ ಭೇಟಿಯಾದೆವು.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ನನ್ನ ಪರಿಚಯದ ಹುಡುಗಿಯೊಬ್ಬಳಿಗೆ ಆದಿತ್ಯ ಪ್ರಪೋಸ್ ಮಾಡಿದ್ದ. ಹೀಗಾಗಿ ಈ ಬಗ್ಗೆ ನಾನು ಅವನಲ್ಲಿ ಆಕೆಯನ್ನು ಪ್ರೀತಿಸದಂತೆ ಹೇಳಲು ಹೋಗಿದ್ದ ವೇಳೆ ಮಾತುಕತೆ ನಡೆಯಿತು. ಆ ಬಳಿಕದಿಂದ ನಾವು ಸ್ನೇಹಿತರಾದೆವು.
► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?
ಎಲ್ಲರಿಗೂ ಸಹಾಯ ಮಾಡುವ ಗುಣ ನನಗೆ ಹೆಚ್ಚು ಇಷ್ಟ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
ಖಂಡಿತ ಇಲ್ಲ. ಆತ ಎಂದೂ ಸಿಟ್ಟು ಬರಿಸಿಲ್ಲ.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ನಟ ದರ್ಶನ್ ಅಂದರೆ ನಮ್ಮಿಬ್ಬರಿಗೂ ತುಂಬಾ ಅಚ್ಚು ಮೆಚ್ಚು.
► ನಿಮ್ಮ ನಡುವಿನ ವಿರೋಧಾಭಾಸಗಳು ?
ರಾಜಕೀಯ ನಮ್ಮ ನಡುವಿನ ದೊಡ್ಡ ವಿರೋಧಿ. ಆದಿತ್ಯನಿಗೆ ರಾಜಕೀಯದಲ್ಲಿ ಆಸಕ್ತಿ ಹೆಚ್ಚು. ನನಗೆ ರಾಜಕೀಯ ಅಂದರೆ ತುಂಬಾ ಅಲರ್ಜಿ.
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ನಮ್ಮ ನಡುವೆ ಯಾವುದೇ ಜಗಳ ನಡೆದಿಲ್ಲ. ನಡೆಯದೇ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ.
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ನಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದರೆ ತ್ಯಾಗ.
► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
ನಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಸಮಾನ ಮನಸ್ಕರಾಗಿರಬೇಕು.
► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
ಖಂಡಿತ ಇಲ್ಲ. ಆತನ ಮೇಲೆ ಯಾವತ್ತೂ ಹೊಟ್ಟೆಕ್ಕಿಚ್ಚು ಆಗಿಲ್ಲ.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
ಶಮಂತ್, ಕಿರಣ್ ನಾನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ಸ್.
ಪವನ್ ಪಿವಿ, ಶಿವಮೊಗ್ಗ