32 ವರ್ಷಗಳ ಸ್ನೇಹ ನಮ್ಮದು: ಸರಿತಾ ಟೈಟಸ್
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನನ್ನ ಬೆಸ್ಟ್ ಫ್ರೆಂಡ್ ಫಿಲೋಮಿನಾ ರಸ್ಕೀನಾ
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ಸೈಂಟ್ ಆ್ಯಗ್ನೆಸ್ ಹೈಸ್ಕೂಲ್‌ನಲ್ಲಿ 8ನೆ ತರಗತಿಯಲ್ಲಿ ಕಲಿಯುತ್ತಿದ್ದಾಗ ನಾವು ಸ್ನೇಹಿತರಾಗಿದ್ದು, ಕಳೆದ 32 ವರ್ಷಗಳಿಂದ ಬೆಸ್ಟ್ ಫ್ರೆಂಡ್‌ಗಳಾಗಿದ್ದೇವೆ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆಯಾಗಿ ಸಹಕರಿಸಿದಾಕೆ.
► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?
ಆಕೆಯ ನೆರವು ಹಾಗೂ ಪ್ರೀತಿ ನನಗಿಷ್ಟ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
ನಾವಿಬ್ಬರು ಯಾವತ್ತೂ ಯಾವುದೇ ವಿಷಯಕ್ಕೆ ಸಿಟ್ಟು ಮಾಡಿದವರಲ್ಲ.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ನಾವಿಬ್ಬರೂ ತಿಳಿಯಾದ ಬಣ್ಣಗಳನ್ನೇ ಇಷ್ಟ ಪಡುವವರು.
► ನಿಮ್ಮ ನಡುವಿನ ವಿರೋಧಾಭಾಸಗಳು ?
ಹೈಸ್ಕೂಲ್ ಕಲಿಕೆಯ ಸಮಯದಲ್ಲಿ ನನಗೆ ಕೊಕ್ಕೋ ಅಂದರೆ ಇಷ್ಟ. ಆಕೆಗೆ ತ್ರೋಬಾಲ್.
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ಈವರೆಗೂ ನಾವು ಕೋಪ ಮಾಡಿಕೊಳ್ಳುವ ಪ್ರಸಂಗವೇ ಎದುರಾಗಿಲ್ಲ.
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ಗೆಳೆತನವೆಂದರೆ ಸುಖದಲ್ಲಿ ಮಾತ್ರವಲ್ಲ, ಕಷ್ಟದ ಸಮಯದಲ್ಲೂ ಜೊತೆಯಾಗಿರುವುದು. ಒಬ್ಬರಿಗೊಬ್ಬರು ಆಧಾರವಾಗಿರುವುದು.
► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಪರಸ್ಪರ ಮಾರ್ಗದರ್ಶಕರಾಗಿರಬೇಕು. ಏನೇ ತೊಂದರೆ, ಸಮಸ್ಯೆ ಇದ್ದರೂ ಅದನ್ನು ನೇರವಾಗಿ ಹೇಳಿಕೊಳ್ಳುವ, ಪರಿಹರಿಸಿಕೊಳ್ಳುವುದೇ ನಿಜವಾದ ಗೆಳೆತನ.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
ನಾನು ಶಿಕ್ಷಕ ತರಬೇತಿಯಲ್ಲಿದ್ದ ಸಂದರ್ಭ ಹಲವು ಆತ್ಮೀಯರಲ್ಲಿ ಪದ್ಮಲತಾ ಎಂಬಾಕೆ ನನಗೆ ತುಂಬಾ ಆತ್ಮೀಯರಾಗಿದ್ದರು. ಅವರನ್ನು ನಾನು ಇಂದಿಗೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬೆಸ್ಟ್ ಫ್ರೆಂಡ್ ಫಿಲೋಮಿನಾ ಅತ್ಯುತ್ತಮ ಶಿಕ್ಷಕಿ. ಮಕ್ಕಳ ಬಗ್ಗೆ ಅತೀವ ಪ್ರೀತಿ ಹಾಗೂ ಕಾಳಜಿಯನ್ನು ಹೊಂದಿರುವ ಆಕೆ ಅಷ್ಟೇ ಜವಾಬ್ದಾರಿಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವುದು ಆಕೆಯ ಬಗ್ಗೆ ನಾನು ಮತ್ತಷ್ಟು ಹೆಮ್ಮೆ ಪಡಲು ಕಾರಣ.
- ಸರಿತಾ ಟೈಟಸ್
ಮುಖ್ಯೋಪಾಧ್ಯಾಯಿನಿ,
ಸೈಂಟ್ ಜೋಸೆಫ್ ಹಿರಿಯ ಪ್ರಾಥವಿುಕ ಶಾಲೆ, ಬಜಾಲ್, ಮಂಗಳೂರು.