ನನ್ನ ಗೆಳತಿ ಅತ್ಯಮೂಲ್ಯ ರತ್ನ: ರಶ್ಮಿತಾ
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನನ್ನ ಬೆಸ್ಟ್ ಫ್ರೆಂಡ್ ಹೆಸರು ದೀಕ್ಷಿತಾ.
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ಪ್ರಥಮ ಪಿಯುಸಿಯ ಪ್ರವೇಶ ದಿನ ನಮ್ಮಿಬ್ಬರ ಪರಿಚಯ ಗೆಳೆತನವಾಗಿ, ಕಳೆದ ನಾಲ್ಕು ವರ್ಷಗಳಿಂದ ನಾವು ಆತ್ಮೀಯರಾಗಿದ್ದೇವೆ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
* ಆಕೆ ಇತರರ ಜೊತೆ ಆತ್ಮೀಯವಾಗಿ ಬೆರೆತು ಸಹಕರಿಸುವ, ನೆರವಾಗುವ ಗುಣ ತುಂಬಾ ಇಷ್ಟ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
* ನನ್ನಲ್ಲಿ ಏನೂ ಮಾತನಾಡದಿದ್ದಾಗ ನನಗೆ ತುಂಬಾ ಕೋಪ ಬರುತ್ತದೆ.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
* ಚಿಕನ್ ಖಾದ್ಯಗಳು ನಮಗಿಬ್ಬರಿಗೂ ತುಂಬಾ ಅಚ್ಚುಮೆಚ್ಚು.
► ನಿಮ್ಮ ನಡುವಿನ ವಿರೋಧಾಭಾಸಗಳು ?
* ನಾನು ಸಲ್ವಾರ್ ಇಷ್ಟಪಟ್ಟರೆ, ಆಕೆಗೆ ಜೀನ್ಸ್ ಇಷ್ಟ.
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
*ನಮ್ಮಿಬ್ಬರ ನಡುವೆ ಜಗಳ ನಡೆದಿದೆ. ಆದರೆ ಅದೇನೂ ಗಂಭೀರ ವಿಷಯಕ್ಕಲ್ಲ.
► ಮೊದಲು ರಾಜಿ ಆದದ್ಯಾರು ?
* ಮೊದಲು ರಾಜಿ ಆಗಿದ್ದು ನಾನೇ
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
*ಪ್ರತಿಯೊಂದು ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವುದು. ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸಲು ಪರಸ್ಪರ ಸಹರಿಸುವವರೇ ಬೆಸ್ಟ್ ಫ್ರೆಂಡ್ ಗಳು.
► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
* ಬೆಸ್ಟ್ ಫ್ರೆಂಡ್ ಗಳು ದೂರವಾಗಿದ್ದರೂ ಮರೆಯಬಾರದು.
► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
* ನಾನು ಯಾವತ್ತೂ ನನ್ನ ಬೆಸ್ಟ್ ಫ್ರೆಂಡ್ ಬಗ್ಗೆ ಹೊಟ್ಟೆಕಿಚ್ಚು ಪಟ್ಟಿದ್ದೇ ಇಲ್ಲ.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
* ನಾನು ಶಾಲಾ ದಿನಗಳಿಂದ ಅಂದರೆ, ಸುಮಾರು 15 ವರ್ಷಗಳಿಂದ ಆತ್ಮೀಯಳಾಗಿದ್ದ ಗೆಳತಿ ನೀತಾಳನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತಿರುತ್ತೇನೆ. ನನ್ನ ಆತ್ಮೀಯ ಗೆಳತಿ ನನ್ನ ಜೀವನದಲ್ಲಿ ದೊರಕಿದ ಅತ್ಯಮೂಲ್ಯ ರತ್ನ. ಆಕೆ ಸದಾ ನನ್ನೊಂದಿಗೆ ಜೀವನ ಪರ್ಯಂತ ಆತ್ಮೀಯಳಾಗಿರಬೇಕೆಂಬುದು ನನ್ನ ಆಸೆ.
- ರಶ್ಮಿತಾ, ವಿದ್ಯಾರ್ಥಿನಿ
ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ಕೋರ್ಸ್
ಕೊಲಾಸೊ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸಾಯನ್ಸ್, ಮಂಗಳೂರು.