ಸ್ನೇಹಕ್ಕೆ ಮುನ್ನುಡಿ ಬರೆದ ಎಕನಾಮಿಕ್ಸ್ ಕ್ಲಾಸ್ ನ ನಗು: ರಸೀನಾ

Update: 2018-08-04 18:16 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ತಸ್ಲೀಮಾ ನನ್ನ ಬೆಸ್ಟ್ ಫ್ರೆಂಡ್

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? 

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಪಿಯು ಕಾಲೇಜಿನಲ್ಲಿ ನಮ್ಮಿಬ್ಬರ ಸ್ನೇಹ ಆರಂಭವಾಯಿತು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಕಾಲೇಜಿನಲ್ಲಿ ಎಕನಾಮಿಕ್ಸ್ ಕ್ಲಾಸ್ ನಡೆಯುತ್ತಿದ್ದ ವೇಳೆ ನಾನು ನಕ್ಕಿದ್ದೆ. ಆಗ ಟೀಚರ್ ನನ್ನನ್ನು ಮತ್ತು ನನ್ನ ಪಕ್ಕದಲ್ಲಿ ಕುಳಿತಿದ್ದ ತಸ್ಲೀಮಾಳನ್ನು ತರಗತಿಯ ಮುಂಭಾಗಕ್ಕೆ ಕರೆದು ಎಲ್ಲರ ಎದುರು ನಿಲ್ಲಿಸಿದ್ದರು. ನಂತರ ನೀವೇ ಪಾಠ ಮಾಡಿ ಎಂದು ನಾನು ಮಾಡಿದ ತಪ್ಪಿಗೆ ಅವಳನ್ನು ಬೈದಿದ್ದರು. ಆಗ ಏನೂ ಮಾತನಾಡದೆ ಆಕೆ ಸುಮ್ಮನಿದ್ದಳು. ಆ ಘಟನೆಯ ಬಳಿಕ ನಮ್ಮ ಸ್ನೇಹ ಆರಂಭವಾಯಿತು.

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ? 

ಅವಳ ನೇರನುಡಿ, ಸಹನೆ ನನಗೆ ಇಷ್ಟ.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ? 

ಕಾಲೇಜಿನಲ್ಲಿ ನಡೆಯುವ ಸಮಾರಂಭಗಳನ್ನು ಅವಳು ಮಿಸ್ ಮಾಡಿದಾಗ ಸಿಟ್ಟು ಬರುತ್ತಿತ್ತು.

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ? 

ಬಿರಿಯಾನಿ,  ಥ್ರೋ ಬಾಲ್ ಆಟ ನಮ್ಮ ಅಚ್ಚುಮೆಚ್ಚಿನವು.

► ನಿಮ್ಮ ನಡುವಿನ ವಿರೋಧಾಭಾಸಗಳು ? 

ವಿರೋಧಾಭಾಸಗಳೇನೂ ಇಲ್ಲ.

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ಹುಡುಗರಿಗೆ ನೋಟ್ಸ್ ಬರೆದು ಕೊಡುವುದಕ್ಕೆ ಸ್ವಲ್ಪ ಜಗಳ ಆಗಿತ್ತು.

► ಮೊದಲು ರಾಜಿ ಆದದ್ಯಾರು ? 

ಮರುದಿನ ನಾನೇ ಆಕೆಯಲ್ಲಿ ಕ್ಷಮೆ ಕೇಳಿ ರಾಜಿಯಾಗಿದ್ದೆ.

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ? 

ಸ್ನೇಹಿತರ ಜೊತೆ ನಮ್ಮ ಎಲ್ಲ ರಹಸ್ಯಗಳನ್ನು ಮುಚ್ಚು ಮರೆಯಿಲ್ಲದೆ ಹೇಳಬಹುದು. ಸ್ನೇಹಿತರಲ್ಲಿರುವಷ್ಟು ನಂಬಿಕೆ ಬೇರೆ ಯಾರಲ್ಲೂ ಇರುವುದಿಲ್ಲ. ಸ್ನೇಹಿತರೆಂದರೆ ನಮ್ಮ ಡೈರಿ ಇದ್ದ ಹಾಗೆ. ನಮ್ಮ ಜೀವನದ ಪ್ರತೀ ವಿಷಯಗಳನ್ನು ಹಂಚಿಕೊಳ್ಳಬೇಕು.

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ? 

ಸ್ನೇಹಿತರೆಂದರೆ, ನಂಬಿಕೆಯ ಜೊತೆಗೆ ತಂದೆಯ ಪ್ರೀತಿ, ತಾಯಿಯ ಮಮತೆ, ಅಕ್ಕ ತಂಗಿಯ ವಾತ್ಸಲ್ಯ, ಅಣ್ಣ ತಮ್ಮಂದಿರಂತೆ ಧೈರ್ಯ ತುಂಬುವವರಾಗಿರಬೇಕು.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?

ನನ್ನ ಬಾಲ್ಯ ಮತ್ತು ಹೈಸ್ಕೂಲ್ ಫ್ರೆಂಡ್ ನನ್ನು ತುಂಬಾ ಮಿಸ್ ಮಾಡ್ಕೊಳ್ಳುತ್ತಿದ್ದೇನೆ.

- ರಸೀನಾ, ಪೆರ್ಮನ್ನೂರು ತೊಕ್ಕೊಟ್ಟು ಉಳ್ಳಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ