ನನ್ನ ಬೆಸ್ಟ್ ಫ್ರೆಂಡ್ ಹೆಸರು ಆಶಿಕ್ ಕುಕ್ಕಾಜೆ: ರಹಿಮಾನ್ ಮಿತ್ತೂರು

Update: 2018-08-05 06:11 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ನನ್ನ ಬೆಸ್ಟ್ ಫ್ರೆಂಡ್ ಹೆಸರು ಆಶಿಕ್ ಕುಕ್ಕಾಜೆ

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? 

ಸಾಮಾಜಿಕ ತಾಣದಲ್ಲಿ ಹಲವು ವರ್ಷಗಳ ಪರಿಚಯವಿದ್ದರೂ, ಮೂರು ತಿಂಗಳ ಹಿಂದೆ ಬಿ.ಸಿ.ರೋಡ್ ನಲ್ಲಿ ನಡೆದ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಒಂದು ಸಮಾರಂಭದಲ್ಲಿ ಮುಖತಃ ಭೇಟಿಯಾದೆವು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಆಶಿಕ್ ನ ಪ್ರೀತಿ ತುಂಬಿದ ವ್ಯಕ್ತಿತ್ವ ಹಾಗೂ ಹೃದಯ ವೈಶಾಲ್ಯತೆ ಭೇಟಿಯಾದ ಮರು ಘಳಿಗೆಯಿಂದಲೇ ನನ್ನ  ಬೆಸ್ಟ್ ಫ್ರೆಂಡ್ ಆಗುವಂತೆ ಮಾಡಿತು. 

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ? 

ಆತನ ಪರೋಪಕಾರಿ ಮನೋಭಾವ ಹಾಗೂ ಆತನಲ್ಲಿರುವ ಸಮಾಜ ಸೇವೆಯ ಗುಣಗಳು ನನಗೆ ಬಹಳ ಇಷ್ಟವಾಯಿತು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ? 

ಅಂತಹ ಅನುಭವ ನನಗೆ ಈವರೆಗೆ ಆಗಿಲ್ಲ.

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ? 

ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡುವುದು, ಮಿತ್ರರೊಂದಿಗೆ ವಿಹಾರಕ್ಕೆ ತೆರಳುವುದು ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸಂದರ್ಶಿಸುವುದು ನಮ್ಮಲ್ಲಿರುವಸಾಮ್ಯತೆಗಳು.

► ನಿಮ್ಮ ನಡುವಿನ ವಿರೋಧಾಭಾಸಗಳು ?

ನಾನು ರಾಜಕೀಯವೆಂದರೆ ಸ್ವಲ್ಪ ಹಿಂದೆ, ಆಶಿಕ್ ರಾಜಕೀಯವಾಗಿ ಸ್ವಲ್ಪ ನನಗಿಂತ ಮುಂದು. ಇದೇ ನಮ್ಮಲ್ಲಿರುವ ವಿರೋಧಾಬಾಸ.

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?

ಇಷ್ಟರವರೆಗೆ ಜಗಳದ ಅನುಭವವಾಗಿಲ್ಲ.

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ? 

ಫ್ರೆಂಡ್ ಶಿಪ್ ಎನ್ನುವುದು ಎಲ್ಲದಕ್ಕೂ ಮಿಗಿಲಾದ ಸಂಬಂಧ. ಫ್ರೆಂಡ್ ಶಿಪ್ ಮೂಲಕ ಯಾವುದೇ ಜಟಿಲ ಸಮಸ್ಯೆಯನ್ನೂ ಕೂಡ ಪರಿಹರಿಸಬಹುದು.  ಸ್ನೇಹಿತರು  ಸಮಾನ  ಮನಸ್ಕರಾಗಿದ್ದರೆ ಸಮಾಜದ ಯಾವುದೇ ಕೊರತೆಗಳನ್ನು ನೀಗಿಸುವ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಬಹುದು.

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?

ಬೆಸ್ಟ್ ಫ್ರೆಂಡ್ ಅಂದರೆ, ಕೇವಲ ಮನುಷ್ಯತ್ವವನ್ನು ನೋಡಿ ಗೆಳೆತನವನ್ನು ಮಾಡುವವನಾಗಿರಬೇಕು. ಹಣ ಅಂತಸ್ತು ಅಥವಾ ಹಿನ್ನೆಲೆಯನ್ನು ನೋಡಿ  ಗೆಳೆತನವನ್ನು ಮಾಡುವವನಾಗಿರಬಾರದು.

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ? 

ಆತನ ಸಾಮಾಜಿಕ ಕಳಕಳಿಯನ್ನು ನೋಡಿ ನಾನು ಕೂಡ ಆತನಂತೆ ಆಗಬೇಕೆಂದು ಅಸೂಯೆ ಪಟ್ಟಿದ್ದೆ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?

ಆಶಿಕ್ ನಂತೆಯೇ ರಹ್ಮತ್ ಗೂಡಿನ ಬಳಿ, ಸಂಶುದ್ದೀನ್ ಸಾಣೂರು ಹಾಗೂ ಉಮ್ಮರ್ ನಾರಿಯಾ ಮಿತ್ತೂರು ಇವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. 

- ಎಸ್.ಎ.ರಹಿಮಾನ್ ಮಿತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ