ತಿಪ್ಪೇಶಿ ಹೊರತು ಬೇರೆ ಯಾರು ನನಗೆ ಸ್ನೇಹಿತರಿಲ್ಲ: ಅವರೆಗೆರೆ ವಾಸು

Update: 2018-08-05 11:04 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? 

ಎ.ತಿಪ್ಪೇಶಿ ನನಗೆ ಬಾಲ್ಯದಿಂದಲೂ ಅತ್ಮೀಯ ಸ್ನೇಹಿತ

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?

ನಮ್ಮೂರ ಅವರಗೆರೆಯಲ್ಲಿ, ಕ್ರಿಕೆಟ್ ಆಟದ ಸಮಯದಲ್ಲಿ

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? 

ಸೋಲು - ಗೆಲವು ಎರಡರಲ್ಲೂ ನನ್ನ ಜೊತೆ ಇದಿದ್ದರಿಂದ ಒಳ್ಳೇಯ ಸ್ನೇಹಿತರಾದೆವು.

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?

ಯಾವುದೇ ವಿಷಯಗಳಲ್ಲಿ ಚರ್ಚೆ ಮಾಡುವ ಗುಣ

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?

ನಟ ಅಂಬರೀಷ್

► ನಿಮ್ಮ ನಡುವಿನ ವಿರೋಧಾಭಾಸಗಳು ? 

ವಿರೋಧಾಭಾಸಗಳು ಇಲ್ಲ

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ? 

ಜಗಳ ನಡೆದಿಲ್ಲ

► ಮೊದಲು ರಾಜಿ ಆದದ್ಯಾರು ? 

ಇಬ್ಬರು ರಾಜಿಯಾಗಿದ್ದೇವೆ

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ? 

ಸ್ನೇಹಿತರು ಎಂದರೆ ಕಷ್ಟ ಮತ್ತು ಸುಖದಲ್ಲಿ ಜೊತೆಯಾಗಿರುವುದು

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ? 

10) ನನ್ನ ಸ್ನೇಹಿತನ ಬಗ್ಗೆ ಎಂದು ಹೊಟ್ಟೆ ಕಿಚ್ಚು ಬಂದಿಲ್ಲ

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?

ಬೇರೆ ಯಾರು ನನಗೆ ಸ್ನೇಹಿತರಿಲ್ಲ

-ಅವರೆಗೆರೆ ವಾಸು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ