ಗುಟ್ಟಾಗಿ ನನ್ನ ತಪ್ಪುಗಳನ್ನು ತಿದ್ದುವವನೆ ನಿಜವಾದ ಗೆಳೆಯ: ಶ್ರೀಕಾಂತ ಪಾಟೀಲ, ಗದಗ

Update: 2018-08-05 11:02 GMT

► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?

ನನ್ನ ಬೆಸ್ಟ್‌ ಫ್ರೆಂಡ್ ಹೆಸರು ಈರಣ್ಣ

► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?

ಊರಲ್ಲಿ, ನಾವು ಹುಟ್ಟುತ್ತಾನೇ ಚಡ್ಡಿ ದೋಸ್ತ್ರು

► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?

ಅವನಲ್ಲಿರುವ ಕೆಲವೊಂದಿಷ್ಟು ಗುಣಗಳು ಅಂದರೆ ಇನ್ನೊಬ್ಬರಿಗೆ ಸಹಾಯ ಮಾಡೊದು. ಹಿರಿಯರನ್ನು ಗೌರವಿಸುವ ಗುಣದಿಂದ

► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?

ಅವನು ನನ್ನ ಬಗ್ಗೆ ಕಾಳಜಿ ವಹಿಸುವುದು. ನಾನು ಅವನಿಗೆ ಬೈದಾಗ ಅವನು ಕೋಪ ಮಾಡಿಕೊಳ್ಳದೇ ಇರುವುದು.

► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?

ನನಗೆ ಇಷ್ಟವಿರದ ವಿಷಯವನ್ನು ನನ್ನ ಹತ್ತಿರ ಪದೇ ಪದೇ ಹೇಳುವಾಗ. ಸ್ನೇಹಿತರ ಜೊತೆ ಜಿದ್ದು ಕಟ್ಟಿ ಸೋತಾಗ

► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?

ನಮ್ಮಲ್ಲಿ ಸಾಮ್ಯತೆಗಳು ಅಂತಾ ಏನು ಇಲ್ಲ, ನನಗೆ ಇಷ್ಟಾ ಆಗಿದ್ದು, ಅವನಿಗೂ ಆಗುತ್ತೆ ಅವನಿಗೆ ಇಷ್ಟಾ ಆಗಿದ್ದು, ನನಗೂ ಆಗುತ್ತೆ.

ಯಶ್, ಸುದೀಪ್, ಚಿಕನ್ ಅಂದ್ರೆ ಪಂಚಪ್ರಾಣ.

► ನಿಮ್ಮ ನಡುವಿನ ವಿರೋಧಾಭಾಸಗಳು ?

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಯಗಳು ಬಂದಿಲ್ಲ. ಬಂದರೂ ಅದು ಕಡಿಮೆ. ಇಬ್ಬರಲ್ಲಿ ಯಾರಿಗೆ ಕೋಪ ಬಂದರೂ ಅದನ್ನೂ ಕೂಲ್ಆಗಿ ನಿಭಾಯಿಸುವ ಕಲೆ ಇಬ್ಬರಲ್ಲಿಯೂ ಇದೆ.

► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?

ಹಾಂ.. ಬಹಳಷ್ಟು ಸಲ ಸಣ್ಣ ಪುಟ್ಟ ಕೆಲಸಗಳಿಗೆಲ್ಲ ಜಗಳ ಆಡಿದ್ದೇವೆ. ಮತ್ತೆ ಒಂದು ತಾಸಿನೊಳಗೆ ಒಂದಾಗಿಬಿಡುತ್ತೇವೆ.

► ಮೊದಲು ರಾಜಿ ಆದದ್ಯಾರು ?

ಮೊದಲು ಅವನೆ ರಾಜೀಯಾಗುತ್ತಾನೆ. ನಾನು ಸ್ವಲ್ಪ ಮುಂಗೋಪಿ

► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?

ಎಲ್ಲರ ಮುಂದೆ ತೆಗಳದೆ, ಗುಟ್ಟಾಗಿ ನನ್ನ ತಪ್ಪುಗಳನ್ನು ತಿದ್ದುವವನೆ ನಿಜವಾದ ಗೆಳೆಯ

► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?

ತಂದೆಯಂತೆ, ತಾಯಿಯಂತೆ, ಸಹೋದರನಂತೆ, ಸಹೋದರಿಯಂತಿರಬೇಕು. ಅವಶ್ಯವಿದ್ದಾಗ ಇದ್ದು, ಅವಶ್ಯವಿಲ್ಲದಾಗ ಕೈ ಕೊಟ್ಟು ಹೋಗದೇ ಸ್ನೇಹಿತನ ಕಷ್ಟಗಳಲ್ಲಿ ಭಾಗಿಯಾಗುವಂತವನಾಗಿರಬೇಕು.

► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?

ಹಾಗೇನು ಹೊಟ್ಟೆಕಿಚ್ಚಾಗಿಲ್ಲ. ಯಾಕೆಂದರೆ ಅವನೆಲ್ಲ ಗುಣಗಳು ನನ್ನ ಗುಣಗಳು ಒಂದೆ ಇದೆ.

► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ ?

ಹೌದು ತುಂಬಾ ಫ್ರೆಂಡ್ಸ್ ಇದ್ದಾರೆ. ನಮ್ಮದೆ ಒಂದು ‘ಗಜಾನನ ಫೆಂಡ್ಸ್ ಗ್ರೂಪ್’ ಅಂತಾ ಇದೆ ಅವರನ್ನು ನಾನು ಮಿಸ್ ಮಾಡ್ಕೊಂತಿದ್ದಿನಿ.

- ಶ್ರೀಕಾಂತ ಪಾಟೀಲ, ಗದಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ