ಉ.ಪ್ರದೇಶ: ‘ರಾಜಾಭಯ್ಯ’ರಿಂದ ಹೊಸಪಕ್ಷದ ಘೋಷಣೆ

Update: 2018-11-16 14:41 GMT

ಲಕ್ನೊ, ನ.16: ಕುಂದ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ, ಮಾಜಿ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾಭಯ್ಯ ಉತ್ತರ ಪ್ರದೇಶದಲ್ಲಿ ನೂತನ ಪಕ್ಷ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಬೆಂಬಲಿಗರ ಒತ್ತಾಯದ ಮೇರೆಗೆ ಆರಂಭಿಸಲಾಗಿರುವ ನೂತನ ಪಕ್ಷದ ಹೆಸರನ್ನು ಶೀಘ್ರ ಘೋಷಿಸಲಾಗುವುದು. ನೂತನ ಪಕ್ಷದ ಅಭ್ಯರ್ಥಿಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ .ಪಕ್ಷದ ಧ್ವಜವು ಮೇಲ್ಭಾಗದಲ್ಲಿ ಹಳದಿ ಹಾಗೂ ಕೆಳಭಾಗದಲ್ಲಿ ಹಸಿರು ಬಣ್ಣವನ್ನು ಹೊಂದಿರಲಿದೆ ಎಂದವರು ತಿಳಿಸಿದ್ದಾರೆ.

 ಈಗ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಇರಾದೆಯಲ್ಲಿಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದ ಅವರು, ದಲಿತ ದೌರ್ಜನ್ಯ ಕಾಯ್ದೆಯ ಕೆಲವು ಅಂಶಗಳಿಂದಾಗಿ ಜನತೆಗೆ ಸಮಸ್ಯೆಯಾಗಿದೆ ಎಂದರು. ಈ ಹಿಂದಿನ ಕಲ್ಯಾಣ್ ಸಿಂಗ್, ರಾಂಪ್ರಕಾಶ್ ಗುಪ್ತ, ರಾಜನಾಥ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರದಲ್ಲಿ ಹಾಗೂ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸರಕಾರದಲ್ಲೂ ರಾಜಾಭಯ್ಯ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News