ಅವನಿದ್ದರೆ....
Update: 2019-02-14 06:09 GMT
ಜಗದ ಜಂಜಾಟ,
ಒತ್ತಡಗಳೇನೇ ಇರಲಿ
ಅವನ 'ಪ್ರೀತಿಯ' ನೆನೆದಾಗ
ಹಗುರಾಗಿ ಬಿಡುತ್ತೇನೆ
ಲಿಫ್ಟ್ ನಲ್ಲಿ ಚಲಿಸಿದಂತೆ!
............................
ತುದಿ ಮೂಗಿನವರೆಗೂ
ಕೋಪ ಬುಸುಗುಟ್ಟುತ್ತಿದ್ದರೂ
ಅವನ ಎರಡಕ್ಷರದ
'ಸ್ವಾರಿ’ಗೆ
ಕರಗಿಬಿಡುತ್ತೇನೆ...
............................
ಐಸ್ ಕ್ರೀಮಿನಂತೆ!
ದುಡಿದು ಬಳಲಿ
ನಿತ್ರಾಣಗೊಂಡರೂ
ಅವನ ಮಾತುಗಳ ಕೇಳಿ
ಮತ್ತೆ ಹಸಿರಾಗುತ್ತೇನೆ
ಚಿಗುರಿನಂತೆ
............................
ಅವನೊಡನಿದ್ದಷ್ಟೂ
ಕ್ಷಣಗಳು
ಮಗುವಾಗುತ್ತೇನೆ,
ಮನಬಿಚ್ಚಿ
ನಗುನಗುತ್ತಾ
ಹೂವಿನಂತೆ!
-ಹಸೀನ ಮಲ್ನಾಡ್