ಒಂದೇ ವರ್ಷದಲ್ಲಿ ಸತತ 5ನೇ ಬಾರಿ ಸಾಲದ ಮೇಲಿನ ರೆಪೋ ದರ ಇಳಿಸಿದ ಆರ್‌ಬಿಐ

Update: 2019-10-04 07:08 GMT

ಹೊಸದಿಲ್ಲಿ, ಅ.4: ರಾಷ್ಟ್ರದಲ್ಲಿ ಹಣದುಬ್ಬರವನ್ನು ನಿಯಂತ್ರಿಸಿ ಆರ್ಥಿಕತೆಯನ್ನು ಮತ್ತೆ ಪ್ರಗತಿಯ ಹಳಿಗೆ ತರುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷ 5ನೇ ಬಾರಿ ಮತ್ತೆ ರೆಪೋ ದರವನ್ನು ಇಳಿಕೆ ಮಾಡಲು ಮುಂದಾಗಿದೆ.

ಈ ಮಹತ್ವದ ನಿರ್ಧಾರಕ್ಕೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿಯ ಆರು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

 ಕಳೆದ ಆಗಸ್ಟ್‌ನಲ್ಲಿ ನಡೆದ ಕೊನೆಯ ಹಣಕಾಸು ಸಮಿತಿ ಸಭೆಯಲ್ಲಿ ರೆಪೋ ಸಾಲದ ದರವನ್ನು 35 ಮೂಲಾಂಕದಷ್ಟು ಇಳಿಕೆ ಮಾಡಲಾಗಿತ್ತು. ಇದರೊಂದಿಗೆ ಆರ್‌ಬಿಐ ರೆಪೋ ದರ 5.40 ಪ್ರತಿಶತಕ್ಕೆ ಇಳಿಕೆಯಾಗಿತ್ತು. ಇಂದಿನ ಸಭೆಯಲ್ಲಿ ಕೇಂದ್ರೀಯ ಬ್ಯಾಂಕ್ ತನ್ನ ಪ್ರಮುಖ ಸಾಲದ ದರವನ್ನು ಕನಿಷ್ಠ 25 ಮೂಲಾಂಕದಷ್ಟು ಇಳಿಕೆ ಮಾಡಲು ನಿರ್ಧರಿಸಿದೆ. ರೆಪೋ ದರ 5.15 ಶೇ. ಇಳಿಕೆಯಾಗಲಿದೆ. ಇದರೊಂದಿಗೆ ಆರ್‌ಬಿಐ ಈ ವರ್ಷ ಇಲ್ಲಿಯ ತನಕ 135 ಮೂಲಾಂಕದಷ್ಟು ರೆಪೋ ದರ ಕಡಿತ ಮಾಡಿದಂತಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News