ಇಮ್ರಾನ್‌ಖಾನ್ ವಿರುದ್ಧ ವಾಗ್ದಾಳಿ: ಕೈಫ್ ಹೇಳಿದ್ದೇನು ಗೊತ್ತೇ ?

Update: 2019-10-07 03:55 GMT
ಮೊಹ್ಮದ್ ಕೈಫ್ - ಇಮ್ರಾನ್‌ಖಾನ್

ಹೊಸದಿಲ್ಲಿ: ಪಾಕಿಸ್ತಾನ ಉಗ್ರಗಾಮಿಗಳಿಗೆ ಸುರಕ್ಷಿತವಾದ ಪೋಷಣಾ ತಾಣ ಎಂದು ಮಾಜಿ ಕ್ರಿಕೆಟಿಗ ಮೊಹ್ಮದ್ ಕೈಫ್ ಬಣ್ಣಿಸಿದ್ದಾರೆ.

ಈ ಬಗ್ಗೆ ತಾವು ಬರೆದ ಲೇಖನವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೈಫ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಅವರನ್ನು, "ಶ್ರೇಷ್ಠ ಕ್ರಿಕೆಟಿಗರೊಬ್ಬರು ಪಾಕಿಸ್ತಾನ ಸೇನೆಯ ಸೂತ್ರದ ಬೊಂಬೆಯಾಗಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.

"ಹೌದು; ನಿಮ್ಮ ಪಾಕಿಸ್ತಾನ ಉಗ್ರಗಾಮಿಗಳಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಉಗ್ರರ ಸುರಕ್ಷಿತ ಬೆಳವಣಿಗೆ ತಾಣ. ವಿಶ್ವಸಂಸ್ಥೆಯಲ್ಲಿ ನಿಮ್ಮ ಭಾಷಣ ದುರದೃಷ್ಟಕರ. ಶ್ರೇಷ್ಠ ಕ್ರಿಕೆಟಿಗ ಎಂಬ ಪಟ್ಟದಿಂದ ಪಾಕಿಸ್ತಾನ ಸೇನೆಯ ಹಾಗೂ ಉಗ್ರರ ಸೂತ್ರದ ಗೊಂಬೆಯಾಗುವ ಮಟ್ಟಕ್ಕೆ ಇಳಿದಿದ್ದೀರಿ" ಎಂದು ಇಮ್ರಾನ್‌ ಖಾನ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಇಮ್ರಾನ್‌ ಖಾನ್ ಭಾಷಣವನ್ನು, "ವಿಶ್ವಕ್ಕೆ ಚಿರಪರಿಚಿತರಾಗಿರುವ ಶ್ರೇಷ್ಠ ಕ್ರಿಕೆಟಿಗನ ಭಾಷಣ ಇದಲ್ಲ" ಎಂದು ಬಣ್ಣಿಸಿದ್ದರು.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು, ಅಮೆರಿಕದ ಸುದ್ದಿ ನಿರೂಪಕರು ಪಾಕಿಸ್ತಾನದ ಪ್ರಧಾನಿಯನ್ನು ಟೀಕಿಸುತ್ತಿರುವ ವಿಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News