ಬ್ಯಾಂಕ್ ಗ್ರಾಹಕರ ಗಮನಕ್ಕೆ: 24 ಗಂಟೆಗಳ ಮುಷ್ಕರ ಘೋಷಿಸಿದ ಬ್ಯಾಂಕ್ ಯೂನಿಯನ್ ಗಳು
Update: 2019-10-20 10:19 GMT
ಹೊಸದಿಲ್ಲಿ, ಅ.20: ಇತ್ತೀಚಿಗಿನ ಬ್ಯಾಂಕ್ ಗಳ ವಿಲೀನ ನಿರ್ಧಾರ, ಹೊರಗುತ್ತಿಗೆ ನೌಕರಿ ನಿರ್ಧಾರಗಳನ್ನು ವಿರೋಧಿಸಿ ಅಕ್ಟೋಬರ್ 22ರಂದು 2 ಬ್ಯಾಂಕ್ ಯೂನಿಯನ್ ಗಳು 24 ಗಂಟೆಗಳ ಬ್ಯಾಂಕ್ ಮುಷ್ಕರ ಘೋಷಿಸಿವೆ.
ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್ ಐ) ಅಕ್ಟೋಬರ್ 22ರ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 23ರ ಬೆಳಗ್ಗೆ 6 ಗಂಟೆಯವರೆಗೆ ಮುಷ್ಕರ ಹಮ್ಮಿಕೊಂಡಿರುವುದಾಗಿ ಘೋಷಿಸಿವೆ.
ಬ್ಯಾಂಕಿಂಗ್ ಕ್ಷೇತ್ರಗಳ ಖಾಸಗೀಕರಣ ಮತ್ತು ಹೊರಗುತ್ತಿಗೆ ನೌಕರಿ ವಿರೋಧಿಸಿ ಈ ಮುಷ್ಕರಕ್ಕೆ ಮುಂದಾಗಿರುವುದಾಗಿ ಈ ಎರಡು ಸಂಘಟನೆಗಳು ತಿಳಿಸಿವೆ.