'ಜನರು ಸಾಯುತ್ತಿದ್ದಾರೆ': ದಿಲ್ಲಿ ಮಾಲಿನ್ಯದ ಬಗ್ಗೆ ಕೇಂದ್ರ, ದಿಲ್ಲಿ ಸರಕಾರದ ವಿರುದ್ಧ ಸುಪ್ರೀಂ ಆಕ್ರೋಶ
Update: 2019-11-04 09:37 GMT
ಹೊಸದಿಲ್ಲಿ, ನ.4: ಮಾಲಿನ್ಯದಿಂದಾಗಿ ಜನರು ತಮ್ಮ ಜೀವನದ ಅತ್ಯಮೂಲ್ಯ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ದಿಲ್ಲಿಯ ವಾಯುಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಹೇಳಿತು.
ಈ ಬಗ್ಗೆ ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ಕೋರ್ಟ್, ಜನರು ಸಾಯುತ್ತಿದ್ದಾರೆ. ಈ ವಾತಾವರಣದಲ್ಲಿ ನಾವು ಬದುಕಲು ಸಾಧ್ಯವೇ?, ಮನೆಗಳ ಒಳಗೂ ಜನರು ಸುರಕ್ಷಿತವಾಗಿಲ್ಲ. ಇದು ದೌರ್ಜನ್ಯ" ಎಂದಿತು.