ನಮ್ಮ 'ಸೂರ್ಯಯಾನ ' ಸುರಕ್ಷಿತವಾಗಿ ಇಳಿದಿದೆ : ಸಂಜಯ್ ರಾವತ್
Update: 2019-11-27 08:59 GMT
ಮುಂಬೈ, ನ.27: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲು ಸಜ್ಜಾಗುತ್ತಿದ್ದಂತೆ, ಪಕ್ಷದ ಮುಖಂಡ ಸಂಜಯ್ ರಾವತ್ ಅವರು ಬುಧವಾರ ತಮ್ಮ ಪಕ್ಷ ದಿಲ್ಲಿಯಲ್ಲೂ ಅಧಿಕಾರಕ್ಕೆ ಬಂದರೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಶಿವಸೇನೆಯ ನಾಯಕ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು 'ಸೂರ್ಯಯಾನ’ಕ್ಕೆ ರಾವತ್ ಹೋಲಿಸಿದ್ದಾರೆ.
"ನಾನು ಮೊದಲಿನಿಂದಲೂ ನಾವು ಸರಕಾರ ರಚಿಸುತ್ತೇವೆ ಎಂದು ಹೇಳುತ್ತಿದ್ದೇನೆ. ನಮ್ಮ 'ಸೂರ್ಯನ್ ಸಚಿವಾಲಯದ ಆರನೇ ಮಹಡಿಯಲ್ಲಿ ಸುರಕ್ಷಿತವಾಗಿ ಇಳಿಯಲಿದೆ ಎಂದು ನಾನು ಹೇಳಿದಾಗ ನನ್ನನ್ನು ಯಾರೂ ನಂಬಲಿಲ್ಲ. ಆದರೆ ಈಗ ನಮ್ಮ 'ಸೂರ್ಯಯಾನ ' ಸುರಕ್ಷಿತವಾಗಿ ಇಳಿದಿದೆ "ಎಂದು ರೌತ್ ಹೇಳಿದರು.
"ಶಿವಸೇನೆಯ ಸೂರ್ಯಯಾನ ದಿಲ್ಲಿಯಲ್ಲೂ ಮುಂದೆ ಇಳಿದರೆ ಜನರು ಆಶ್ಚರ್ಯಪಡಬೇಕಾಗಿಲ್ಲ ಎಂದು ಅವರು ಹೇಳಿದರು.