ಬರ್ತ್ ಡೆ ಪಾರ್ಟಿ ಆಚರಿಸಲು ತೆರಳಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Update: 2019-11-30 18:16 GMT
Photo: PTI

ಕೋಯಂಬತ್ತೂರು, ನ. 30: ಪಾರ್ಕೊಂದರಲ್ಲಿ ಗೆಳೆಯರೊಂದಿಗೆ ಜನ್ಮ ದಿನಾಚರಣೆ ಆಚರಿಸಿ ಹಿಂದಿರುಗುತ್ತಿದ್ದ 17 ವರ್ಷದ ಬಾಲಕಿಯ ಮೇಲೆ 6 ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ತಮಿಳುನಾಡಿನ ಕೋಯಂಬತ್ತೂರು ಜಿಲ್ಲೆಯ ಸೀರನಾಯಕನ್ ಗ್ರಾಮದಲ್ಲಿ ನವೆಂಬರ್ 26ರಂದು ಸಂಭವಿಸಿದೆ.

  ಪ್ರಕರಣಕ್ಕೆ ಸಂಬಂಧಿಸಿ 4 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಇಬ್ಬರ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಪಾರ್ಕೊಂದರಲ್ಲಿ ಗೆಳೆಯರೊಂದಿಗೆ ಜನ್ಮದಿನಾಚರಣೆ ಆಚರಿಸಿಕೊಂಡ ಹಿಂದಿರುಗತ್ತಿದ್ದ 11ನೇ ತರಗತಿ ವಿದ್ಯಾರ್ಥಿನಿ ಮೇಲೆ 6 ಮಂದಿಯ ತಂಡ ಸಾಮೂಹಿಕ ಅತ್ಯಾಚಾರ ಎಸಗಿತು ಹಾಗೂ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News