ವಿಶ್ವದ ಹಲವಡೆ ಕಂಕಣ ಸೂರ್ಯಗ್ರಹಣ ಗೋಚರ
ಹೊಸದಿಲ್ಲಿ, ಡಿ.26: ವಿಶ್ವದ ಹಲವಡೆ ಗುರುವಾರ ಬೆಳಗ್ಗೆ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ಆಸ್ಟ್ರೇಲಿಯಾ,ಸೌದಿ, ಅಬುದಾಬಿ, ಕತಾರ್ , ಫಿಲಿಪ್ಪೆನ್ಸ್ , ಚೀನಾ, ಇಂಡೋನೇಷ್ಯಾ, ಸೋಮಾಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಪೊಲೆಂಡ್, ಬಾಂಗ್ಲಾದೇಶ, ಮಲೇಷ್ಯಾ, ಭೂತಾನ್ , ಅಫ್ಘಾನಿಸ್ತಾನ, ಮಾರಿಷಸ್, ಸುಮಾತ್ರ, ಬೆಲಾರಸ್ ಮತ್ತಿತರ ದೇಶಗಳಲ್ಲಿ ಸೂರ್ಯಗ್ರಹಣ ಗೋಚರಿಸಿದೆ.
ದೇಶದ ಕೊಚ್ಚಿ, ಕಾಸರಗೋಡು, ತಿರುವನಂತಪುರ, ಹರಿದ್ವಾರ ಚಂಡಿಗಡ, ಚೆನ್ನೈ, ಅಹ್ಮದಾಬಾದ್, ಅಜ್ಮೀರ್, ಭುವನೇಶ್ವರ್ , ಮುಂಬೈನಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.
ರಾಜ್ಯದ ಮಂಗಳೂರು, ಉಡುಪಿ, ಬೆಳಗಾವಿ, ಶಿವಮೊಗ್ಗ , ಬಳ್ಳಾರಿ, ಕಲಬುರಗಿ, ಯಾದಗರಿ, ಧಾರವಾಡ, ಹುಬ್ಬಳ್ಳಿ, ಹಾಸನ , ಬಾಗಲಕೋಟೆ, ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಕಂಕಣ ಸೂರ್ಯಗ್ರಹಣವಾಗಿದೆ.
ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣದ ಕಾರಣದಿಂದಾಗಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಗಿತ್ತು. ಸೂರ್ಯಗ್ರಹಣ ಆರಂಭದಲ್ಲಿ ಕೇರಳ, ತಮಿಳುನಾಡು, ಕರ್ನಾಟಕದ ಕೆಲವು ನಗರಗಳಲ್ಲಿ ಗೋಚರಿಸಿತು.
ದಿಲ್ಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿದರು. " ಭಾರತದ ಎಲ್ಲರಂತೆ ನಾನು ಕೂಡಾ ಗ್ರಹಣ ವೀಕ್ಷಿಸಲು ಉತ್ಸುಕನಾಗಿದ್ದೆ. ದುರದೃಷ್ಟವಶಾತ್, ಮೋಡದ ಕವಿದ ವಾತಾವರಣದಿಂದಾಗಿ ನನಗೆ ಸೂರ್ಯಗ್ರಹಣವನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಬೇರೆ ಪ್ರದೇಶಗಳ ಗ್ರಹಣದ ನೇರ ಪ್ರಸಾರವನ್ನು ನೋಡಿದೆ. ಖಗೋಳ ಶಾಸ್ತ್ರಜ್ಞರೊಂದಿಗೆ ಕಂಕಣ ಸೂರ್ಯಗ್ರಹಣದ ಬಗ್ಗೆ ಮಾಹಿತಿ ಪಡೆದಿದ್ದೇನೆ" ಎಂದು ಮೋದಿ ಹೇಳಿದ್ದಾರೆ.