ಅಸ್ಸಾಂ:ರೈತ ನಾಯಕ ಗೊಗೊಯಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2019-12-27 17:41 GMT

ಗುವಾಹಟಿ,ಡಿ.17: ಗುವಾಹಟಿಯ ವಿಶೇಷ ಎನ್‌ಐಎ ನ್ಯಾಯಾಲಯವು ಅಸ್ಸಾಮಿನ ರೈತ ನಾಯಕ ಹಾಗೂ ಆರ್‌ಟಿಐ ಕಾರ್ಯಕರ್ತ ಅಖಿಲ ಗೊಗೊಯಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಅವರನ್ನು ಇನ್ನೂ ಹತ್ತು ದಿನಗಳ ಅವಧಿಗೆ ತನ್ನ ವಶಕ್ಕೆ ನೀಡುವಂತೆ ಎನ್‌ಐಎ ಕೋರಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಅಸ್ಸಾಮಿನಲ್ಲಿ ಸಿಎಎ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭ ಎನ್‌ಐಎ ಡಿ.21ರಂದು ಜೋರ್ಹಾಟ್‌ನಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಗೊಗೊಯಿಯವರನ್ನು ಬಂಧಿಸಿತ್ತು.

ಬೆಳಿಗ್ಗೆ ಗುವಾಹಟಿಯ ನಿಝಾರಪಾರಾ ಪ್ರದೇಶದಲ್ಲಿರುವ ಗೊಗೊಯಿ ನಿವಾಸದ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಹಲವಾರು ದಾಖಲೆಗಳನ್ನು ಮತ್ತು ಒಂದು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದೆ.

ಕೃಷಕ ಮುಕ್ತಿ ಸಂಗ್ರಾಮ ಸಮಿತಿ ನಾಯಕರಾಗಿರುವ ಗೊಗೊಯಿ ಅವರ ಎನ್‌ಐಎ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ದಿಲ್ಲಿಯಿಂದ ಇಲ್ಲಿಗೆ ಕರೆತಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

ವಿವಾದಾತ್ಮಕ ಸಿಎಎ ವಿರುದ್ಧ ಅಪ್ಪರ್ ಅಸ್ಸಾಮಿನ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಏರ್ಪಡಿಸುವಲ್ಲಿ ಗೊಗೊಯಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News