ಪೌರತ್ವ ಕಾಯ್ದೆ ದೇಶಕ್ಕೆ ಅನ್ವಯಿಸುತ್ತದೆ: ಕಾನೂನು ಸಚಿವ ರವಿಶಂಕರ್ ಪ್ರಸಾದ್

Update: 2019-12-31 18:45 GMT

ಹೊಸದಿಲ್ಲಿ, ಡಿ.31: ಪೌರತ್ವ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಪೌರತ್ವ ಕಾಯ್ದೆ ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ಸಾಂವಿಧಾನಿಕವಾಗಿದ್ದು ಇದು ಇಡೀ ದೇಶಕ್ಕೆ ಅನ್ವಯಿಸುತ್ತದೆ ಎಂದಿದ್ದಾರೆ.

ಯಾವುದೇ ಕಾನೂನನ್ನು ಅಂಗೀಕರಿಸಲು 7ನೇ ಪರಿಚ್ಛೇದದಡಿ ಸಂಸತ್ತಿಗೆ ಪೂರ್ಣಾಧಿಕಾರವಿದೆ. ಕೇರಳ ವಿಧಾನಸಭೆ ಸೇರಿದಂತೆ ಯಾವುದೇ ವಿಧಾನಸಭೆಗೆ ಈ ಅಧಿಕಾರವಿಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಕಾನೂನು ಇಡೀ ದೇಶಕ್ಕೆ ಅನ್ವಯಿಸುತ್ತದೆ. ಪೌರತ್ವ ಕಾಯ್ದೆ ಭಾರತದ ಮುಸ್ಲಿಮರ ವಿರುದ್ಧವಾಗಿಲ್ಲ, ಅಷ್ಟೇ ಯಾಕೆ ದೇಶದ ಯಾವುದೇ ನಾಗರಿಕರ ವಿರುದ್ಧವಾಗಿಲ್ಲ. ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಮುನ್ನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಜ್ಞರಿಂದ ಕಾನೂನು ಸಲಹೆ ಪಡೆಯಬೇಕಿತ್ತು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News