ಪರಮಾಣು ಸ್ಥಾವರಗಳ ಪಟ್ಟಿಯನ್ನು ಪರಸ್ಪರ ವಿನಿಮಯಿಸಿಕೊಂಡ ಭಾರತ-ಪಾಕಿಸ್ತಾನ

Update: 2020-01-01 15:00 GMT

ಹೊಸದಿಲ್ಲಿ,ಜ.1: ಕಾಶ್ಮೀರ ವಿಷಯ ಕುರಿತು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ನಡುವೆಯೂ ಕಳೆದ 29 ವರ್ಷಗಳಿಂದಲೂ ನಿರಂತರವಾಗಿ ಪಾಲಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿರುವ ಭಾರತ ಮತ್ತು ಪಾಕಿಸ್ತಾನಗಳು ಬುಧವಾರ ದ್ವಿಪಕ್ಷೀಯ ಒಪ್ಪಂದವೊಂದರಡಿ ತಮ್ಮ ಪರಮಾಣು ಸ್ಥಾವರಗಳ ಪಟ್ಟಿಗಳನ್ನು ಪರಸ್ಪರ ವಿನಿಮಯಿಸಿಕೊಂಡಿವೆ. ಈ ಒಪ್ಪಂದವು ಉಭಯ ರಾಷ್ಟ್ರಗಳು ಪರಸ್ಪರರ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸುವುದನ್ನು ನಿಷೇಧಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸ್ಥಾವರಗಳ ವಿರುದ್ಧ ದಾಳಿ ನಿಷೇಧ ಒಪ್ಪಂದದಡಿ ಉಭಯ ರಾಷ್ಟ್ರಗಳು ತಮ್ಮ ಪರಮಾಣು ಸ್ಥಾವರಗಳ ಪಟ್ಟಿಗಳನ್ನು ದಿಲ್ಲಿ ಮತ್ತು ಇಸ್ಲಾಮಾಬಾದ್‌ಗಳಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಏಕಕಾಲದಲ್ಲಿ ಪರಸ್ಪರ ವಿನಿಮಯಿಸಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

1988,ಡಿ.31ರಂದು ಸಹಿ ಮಾಡಲಾಗಿದ್ದ ಈ ಒಪ್ಪಂದವು 1991,ಜ.27ರಿಂದ ಚಾಲ್ತಿಯಲ್ಲಿದೆ. ಇದರಂತೆ ಉಭಯ ರಾಷ್ಟ್ರಗಳು ಪ್ರತಿವರ್ಷದ ಜನವರಿ ಒಂದರಂದು ತಮ್ಮ ಪರಮಾಣು ಸ್ಥಾವರಗಳು ಮತ್ತು ಸೌಲಭ್ಯಗಳ ಮಾಹಿತಿಯನ್ನು ಪರಸ್ಪರ ವಿನಿಮಯಿಸಿಕೊಳ್ಳುವುದು ಕಡ್ಡಾಯವಾಗಿದೆ. 1992,ಜ.1ರಂದು ಮೊದಲ ಬಾರಿ ಪಟ್ಟಿಗಳ ವಿನಿಮಯ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News